ನೆರೆಯ ಪಾಕಿಸ್ತಾನ ಆರ್ಥಿಕ ದಿವಾಳಿತನದಿಂದ ಕಂಗೆಟ್ಟಿರುವ ನಡುವೆಯೇ, ಪಾಕ್‌ ತನ್ನ ಬಾಹ್ಯಾಕಾಶ ಯೋಜನೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ 2035ರ ವೇಳೆಗೆ ಚಂದ್ರನ ಅಂಗಳಕ್ಕೆ ಕಾಲಿಡುವ ಗುರಿಯನ್ನು ಹೊಂದಿದೆ ಎಂದು ಅಲ್ಲಿನ ಯೋಜನಾ ಸಚಿವ ಅಹ್ಸಾನ್ ಇಕ್ಬಾಲ್ ತಿಳಿಸಿದ್ದಾರೆ.

-ಚೀನಾ ಸಹಯೋಗದಿಂದ ಬಾಹ್ಯಾಕಾಶ ಸಂಶೋಧನೆಇಸ್ಲಾಮಾಬಾದ್: ನೆರೆಯ ಪಾಕಿಸ್ತಾನ ಆರ್ಥಿಕ ದಿವಾಳಿತನದಿಂದ ಕಂಗೆಟ್ಟಿರುವ ನಡುವೆಯೇ, ಪಾಕ್‌ ತನ್ನ ಬಾಹ್ಯಾಕಾಶ ಯೋಜನೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ 2035ರ ವೇಳೆಗೆ ಚಂದ್ರನ ಅಂಗಳಕ್ಕೆ ಕಾಲಿಡುವ ಗುರಿಯನ್ನು ಹೊಂದಿದೆ ಎಂದು ಅಲ್ಲಿನ ಯೋಜನಾ ಸಚಿವ ಅಹ್ಸಾನ್ ಇಕ್ಬಾಲ್ ತಿಳಿಸಿದ್ದಾರೆ. ಚೀನಾದ ಸಹಯೋಗದೊಂದಿಗೆ ದೇಶ ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಎತ್ತರವನ್ನು ತಲುಪಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಬಾಹ್ಯಾಕಾಶ ಸಮಾರಂಭದ ಸಮಾರೋಪದಲ್ಲಿ ಮಾತನಾಡಿದ ಅವರು, ‘ಪಾಕ್‌ನ ಮೊದಲ ಗಗನಯಾತ್ರಿ ನ.25ರಂದು ಚೀನಾದ ಬಾಹ್ಯಾಕಾಶ ಕೇಂದ್ರದಿಂದ ತಮ್ಮ ಚೊಚ್ಚಲ ಬಾಹ್ಯಾಕಾಶ ಯಾತ್ರೆಯನ್ನು ಆರಂಭಿಸಲಿದ್ದಾರೆ. ಇದರ ಬೆನ್ನಲ್ಲೇ 2035ರ ಹೊತ್ತಿಗೆ ಚಂದ್ರನ ಮೇಲೆ ನೌಕೆಯನ್ನು ಇಳಿಸುವ ಯೋಜನೆಯಿದೆ’ ಎಂದು ಘೋಷಿಸಿದರು.