ಅಭಿನಂದಿಸಿದ ಮೋದಿಗೆ ಪಾಕ್ ನೂತನ ಪ್ರಧಾನಿ ಶಹಬಾಜ್‌ ಧನ್ಯವಾದ

| Published : Mar 08 2024, 01:47 AM IST

ಸಾರಾಂಶ

ನೂತನವಾಗಿ ಪಾಕಿಸ್ತಾನದ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಶಹಬಾಜ್‌ ಷರೀಫ್‌ ಅವರು ತಮಗೆ ಅಭಿನಂದನೆ ಸಲ್ಲಿಸಿದ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಇಸ್ಲಾಮಾಬಾದ್‌: ನೂತನವಾಗಿ ಪಾಕಿಸ್ತಾನದ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಶಹಬಾಜ್‌ ಷರೀಫ್‌ ಅವರು ತಮಗೆ ಅಭಿನಂದನೆ ಸಲ್ಲಿಸಿದ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಮಂಗಳವಾರ ಪಾಕಿಸ್ತಾನದ 24 ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶೆಹಬಾಜ್ ಅವರನ್ನು ಪ್ರಧಾನಿ ಮೋದಿ ಟ್ವೀಟರ್‌ನಲ್ಲಿ ಅಭಿನಂದಿಸಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಶಹಬಾಜ್‌ ತಮ್ಮ ಟ್ವೀಟರ್‌ ಖಾತೆಯಲ್ಲಿ, ‘ಪಾಕಿಸ್ತಾನದ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಕ್ಕೆ ನನಗೆ ಅಭಿನಂದನೆ ತಿಳಿಸಿದ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು’ ಎಂದು ಪೋಸ್ಟ್‌ ಮಾಡಿದ್ದಾರೆ.