ಸಾರಾಂಶ
ಕೋಟೆ ಕಾಯಲು ಕಳ್ಳನನ್ನೇ ನೇಮಿಸಿದಂತೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಡಿ ಬರುವ ತಾಲಿಬಾನ್ ನಿರ್ಬಂಧ ಸಮಿತಿಗೆ 2025ನೇ ವರ್ಷಕ್ಕೆ ಉಗ್ರಪೋಷಕ ಪಾಕಿಸ್ತಾನವನ್ನು ಅಧ್ಯಕ್ಷ ಮಾಡಲಾಗಿದೆ. ಸಾಲದೆಂಬಂತೆ, ಭಯೋತ್ಪಾದನಾ ನಿಗ್ರಹ ಸಮಿತಿಯ ಉಪಾಧ್ಯಕ್ಷ ಹುದ್ದೆಯನ್ನು ರಷ್ಯಾದೊಂದಿಗೆ ಪಾಕಿಸ್ತಾನಕ್ಕೂ ನೀಡಲಾಗಿದೆ.
ಅಫ್ಘನ್ ತಾಲಿಬಾನ್ ಮೇಲೆ ಕಣ್ಣಿಡುವ ಹೊಣೆ
ವಿಶ್ವಸಂಸ್ಥೆ: ಕೋಟೆ ಕಾಯಲು ಕಳ್ಳನನ್ನೇ ನೇಮಿಸಿದಂತೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಡಿ ಬರುವ ತಾಲಿಬಾನ್ ನಿರ್ಬಂಧ ಸಮಿತಿಗೆ 2025ನೇ ವರ್ಷಕ್ಕೆ ಉಗ್ರಪೋಷಕ ಪಾಕಿಸ್ತಾನವನ್ನು ಅಧ್ಯಕ್ಷ ಮಾಡಲಾಗಿದೆ. ಸಾಲದೆಂಬಂತೆ, ಭಯೋತ್ಪಾದನಾ ನಿಗ್ರಹ ಸಮಿತಿಯ ಉಪಾಧ್ಯಕ್ಷ ಹುದ್ದೆಯನ್ನು ರಷ್ಯಾದೊಂದಿಗೆ ಪಾಕಿಸ್ತಾನಕ್ಕೂ ನೀಡಲಾಗಿದೆ.ಆಪ್ಘಾನಿಸ್ತಾನದ ಭದ್ರತೆ, ಶಾಂತಿ ಮತ್ತು ಸ್ಥಿರತೆಗೆ ಹಾನಿ ಮಾಡುವ ತಾಲಿಬಾನಿಗಳ ಆಸ್ತಿ ಫ್ರೀಜ್ ಮಾಡುವುದು, ವ್ಯಕ್ತಿಗಳು, ಗುಂಪುಗಳ ಅಥವಾ ತಾಲಿಬಾನ್‌ಗೆ ಸಂಬಂಧಿಸಿದ ಘಟಕಗಳ ಮೇಲೆ ಪ್ರಯಾಣ ಹಾಗೂ ಶಸ್ತ್ರಾಸ್ತ್ರ ನಿರ್ಬಂಧ ಹೇರುವುದು 1988ರಲ್ಲಿ ಸ್ಥಾಪನೆಯಾದ ಸಮಿತಿಯ ಕೆಲಸ. ಒಟ್ಟು 15 ರಾಷ್ಟ್ರಗಳು ಈ ಸಮಿತಿಯಲ್ಲಿ ಇರಲಿದ್ದು, ಇದರ ಅಧ್ಯಕ್ಷತೆಯನ್ನು ಇನ್ನು ಪಾಕಿಸ್ತಾನ ವಹಿಸಲಿದೆ. ಹಲವು ಉಗ್ರ ಹುಳುಗಳಿಗೆ ತನ್ನ ನೆಲದಲ್ಲಿ ಜನ್ಮ ನೀಡಿ, ಆಶ್ರಯಿಸುತ್ತಿರುವ ದೇಶವೊಂದಕ್ಕೆ ಈ ಜವಾಬ್ದಾರಿ ನೀಡಿರುವುದು ವಿಪರ್ಯಾಸವೇ ಸರಿ.
ಪಾಕಿಸ್ತಾನವು 2025-26ರ ಅವಧಿಗೆ 15 ರಾಷ್ಟ್ರಗಳ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿದೆ.ಭಾರತವು 2021-22ರ ಅವಧಿಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉಗ್ರವಾದ ನಿಗ್ರಹ ಸಮಿತಿಯ ಅಧ್ಯಕ್ಷನಾಗಿತ್ತು.