ನಿಯೋಗ ನಿರ್ಬಂಧಕ್ಕೆ ಮಲೇಷ್ಯಾಕ್ಕೆ ಕೋರಿದ್ದ ಪಾಕ್‌ಸಾರಾಸಗಟಾಗಿ ಮನವಿ ತಿರಸ್ಕರಿಸಿದ ಮಲೇಷ್ಯಾ

 ನವದೆಹಲಿ: ಪಾಕಿಸ್ತಾನದ ಉಗ್ರಮುಖವನ್ನು ಬಯಲು ಮಾಡಲು ಮಲೇಷ್ಯಾಕ್ಕೆ ತೆರಳಿರುವ ಸರ್ವಪಕ್ಷ ನಿಯೋಗದ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಪಾಕಿಸ್ತಾನ ರಾಯಭಾರ ಕಚೇರಿಯು ಮಲೇಷ್ಯಾಕ್ಕೆ ಒತ್ತಾಯಿಸಿತ್ತು. ಆದರೆ ಪಾಕ್‌ನ ಬೇಡಿಕೆಯನ್ನು ಮಲೇಷ್ಯಾ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿದ್ದು, ಭಾರತದ ನಿಯೋಗಕ್ಕೆ ಸಂಪೂರ್ಣ ಸಹಕಾರ ನೀಡಿದೆ.

ಈ ಮೂಲಕ ವಿದೇಶದಲ್ಲೂ ಭಾರತದ ವಿರುದ್ಧ ಕತ್ತಿ ಮಸೆಯುತ್ತಿದ್ದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದೆ ಎಂದು ಮೂಲಗಳು ತಿಳಿಸಿವೆ.

ಜೆಡಿಯು ಸಂಸದ ಸಂಜಯ್ ಝಾ, ಬಿಜೆಪಿ ಸಂಸದರಾದ ಅಪರಾಜಿತಾ ಸಾರಂಗಿ, ಬ್ರಿಜ್ ಲಾಲ್, ಪ್ರದಾನ್ ಬರೂವಾ, ಹೇಮಾಂಗ ಜೋಶಿ, ಟಿಎಂಸಿ ಸಂಸದ ಅಭಿಷೇಕ ಬ್ಯಾನರ್ಜಿ, ಸಿಪಿಎಂನ ಜಾನ್ ಬ್ರಿಟ್ಟಾಸ್, ಕಾಂಗ್ರೆಸ್‌ನ ಸಲ್ಮಾನ್ ಖುರ್ಷಿದ್ ಹಾಗೂ ಮಾಜಿ ರಾಜತಾಂತ್ರಿಕ ಮೋಹನ್ ಕುಮಾರ್ ಅವರನ್ನೊಳಗೊಂಡ ನಿಯೋಗ ಮಲೇಷ್ಯಾಕ್ಕೆ ತೆರಳಿತ್ತು. ಪೂರ್ವನಿರ್ಧಾರದಂತೆ ಎಲ್ಲ ಸಭೆ, ಕಾರ್ಯಕ್ರಮಗಳು ನಡೆದಿದ್ದು, ಪಾಕ್‌ನ ಕುತಂತ್ರ ವಿಫಲವಾಗಿದೆ.