ಸಾರಾಂಶ
ಭರ್ಜರಿ ಪಾನಿಪುರಿ ವ್ಯಾಪಾರ ಮಾಡಿಕೊಂಡು ಸುಖವಾಗಿದ್ದ ವ್ಯಾಪಾರಿಯೊಬ್ಬರು ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೊಳಿಸಿ ತೆರಿಗೆ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ತಮಿಳುನಾಡಲ್ಲಿ ನಡೆದಿದೆ.
ಚೆನ್ನೈ: ಭರ್ಜರಿ ಪಾನಿಪುರಿ ವ್ಯಾಪಾರ ಮಾಡಿಕೊಂಡು ಸುಖವಾಗಿದ್ದ ವ್ಯಾಪಾರಿಯೊಬ್ಬರು ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೊಳಿಸಿ ತೆರಿಗೆ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ತಮಿಳುನಾಡಲ್ಲಿ ನಡೆದಿದೆ.
ವ್ಯಾಪಾರಿಯೊಬ್ಬರ ಬ್ಯಾಂಕ್ ಖಾತೆಗೆ 2023-24ನೇ ಸಾಲಿನಲ್ಲಿ ಕೇವಲ ಯುಪಿಐ ಮೂಲಕವೇ ಭರ್ಜರಿ 40 ಲಕ್ಷ ರು.ಪಾವತಿಯಾಗಿತ್ತು. ತನಿಖೆ ವೇಳೆ ಇದು ಪಾನಿಪಾರಿ ವ್ಯಾಪಾರಿಯೊಬ್ಬರ ಬ್ಯಾಂಕ್ ಖಾತೆ ಎಂದು ಕಂಡುಬಂದಿದೆ.
ಈ ಮೊತ್ತವು ಜಿಎಸ್ಟಿಯಡಿ ನೋಂದಣಿ ಮಾಡಲು ಇರುವ ಕನಿಷ್ಠ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚಿರುವ ಕಾರಣ ವ್ಯಾಪಾರಿಗೆ ಜಿಎಸ್ಟಿ ಅಧಿಕಾರಿಗಳೂ ನೋಟಿಸ್ ಜಾರಿ ಮಾಡಿದ್ದಾರೆ.
ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಇಂತಹ ನೋಟಿಸ್‌ಗಳಿಂದ ಬೀದಿ ಬದಿ ವ್ಯಾಪಾರಿಗಳು ಆನ್‌ಲೈನ್ ಪಾವತಿಗಳನ್ನು ಕೈಬಿಡಲು ಮುಂದಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.