ನಾಳೆ ಮೋದಿ ಅವರಿಂದ 7ನೇ ‘ಪರೀಕ್ಷಾ ಪೆ ಚರ್ಚಾ’

| Published : Jan 28 2024, 01:15 AM IST / Updated: Jan 28 2024, 07:10 AM IST

PM Narendra Modi speech

ಸಾರಾಂಶ

ಈ ಬಾರಿ ದಾಖಲೆಯ 2.26 ಕೋಟಿ ಮಕ್ಕಳು ನರೇಂದ್ರ ಮೋದಿ ನಡೆಸುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ ಪರೀಕ್ಷೆ ಮಾಡಿ ಕೆಲವರನ್ನು ಮಾತ್ರ ಆರಿಸಲಾಗಿದೆ.

ನವದೆಹಲಿ: ಶಾಲಾ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು ವಾರ್ಷಿಕವಾಗಿ ನಡೆಸುವ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮದ 7ನೇ ಆವೃತ್ತಿಯು ಜ.29ರಂದು ದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿದೆ.

ಪರೀಕ್ಷಾ ಪೆ ಚರ್ಚಾ ಸಂವಾದಕ್ಕೆ ಈ ಬಾರಿ ಪ್ರತಿ ರಾಜ್ಯದಿಂದ ತಲಾ ಇಬ್ಬರು ವಿದ್ಯಾರ್ಥಿಗಳು ಮತ್ತು ಓರ್ವ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

ಅಲ್ಲದೆ ರಾಷ್ಟ್ರೀಯ ಕಲೋತ್ಸವದಲ್ಲಿ ವಿಜೇತರಾದ ವಿದ್ಯಾರ್ಥಿಗಳು ಮತ್ತು ಏಕಲವ್ಯ ಮಾದರಿ ವಸತಿ ಶಾಲೆಯ ಆಯ್ದ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಈ ಬಾರಿ ದಾಖಲೆಯ 2.26 ಕೋಟಿ ವಿದ್ಯಾರ್ಥಿಗಳು ಸಂವಾದಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.