ಸಂಸತ್ತಲ್ಲಿ ಬೆಂಕಿ ಹಚ್ಕೊಳ್ಳಲು ಯೋಜಿಸಿದ್ದ ದಾಳಿಕೋರರು!

| Published : Dec 17 2023, 01:45 AM IST

ಸಂಸತ್ತಲ್ಲಿ ಬೆಂಕಿ ಹಚ್ಕೊಳ್ಳಲು ಯೋಜಿಸಿದ್ದ ದಾಳಿಕೋರರು!
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆಯಲ್ಲಿ ಹೊಗೆ ಬಾಂಬ್‌ ಸಿಡಿಸಿದ ಆರೋಪಿಗಳು ಪೊಲೀಸರ ಮುಂದೆ ಬಿಚ್ಚಿಟ್ಟ ಸ್ಫೋಟಕ ಮಾಹಿತಿ. ಅಗ್ನಿನಿರೋಧಕ ಜೆಲ್‌ ಸಿಗದ ಕಾರಣ ಈ ಪ್ಲಾನ್‌ ಕೈಬಿಟ್ಟರು. ಬಳಿಕ ಸ್ಮೋಕ್‌ ಕ್ಯಾನ್‌ ದಾಳಿ ನಡೆಸಿದರು.

ನವದೆಹಲಿ: ಡಿ.13ರಂದು ಸಂಸತ್ತಿನಲ್ಲಿ ಹೊಗೆಬಾಂಬ್‌ ದಾಳಿ ನಡೆಸಿ ಬಂಧಿತರಾಗಿರುವ 6 ಮಂದಿಯ ಪೈಕಿ ಐವರು, ತಾವು ಮೈಗೆ ಬೆಂಕಿ ಹಚ್ಚಿಕೊಂಡು ಪ್ರತಿಭಟನೆ ನಡೆಸುವ ಸಂಚನ್ನೂ ರೂಪಿಸಿದ್ದೆವು ಎಂಬ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.‘ನಾವು ನಿರುದ್ಯೋಗ ಸೇರಿ ಅನೇಕ ವಿಷಯಗಳ ಬಗ್ಗೆ ಸಂಸತ್ತಿನ ಹಾಗೂ ದೇಶದ ಗಮನ ಸೆಳೆಯಲು ನಿರ್ಧರಿಸಿದ್ದೆವು. ಇದಕ್ಕಾಗಿ 3 ಸಂಚು ರೂಪಿಸಿದ್ದೆವು. ಅದರಲ್ಲಿ ಮೊದಲನೆಯದು- ಸಂಸತ್‌ ಕಟ್ಟಡದ ಒಳಗೆ ನುಗ್ಗಿ ಮೈಗೆ ಬೆಂಕಿ ಹಚ್ಚಿಕೊಳ್ಳುವುದಾಗಿತ್ತು. ಎರಡನೆಯದು- ಸಂಸತ್ತಿನೊಳಗೆ ನುಗ್ಗಿ ಹೊಗೆಬಾಂಬ್‌ (ಕ್ಯಾನಿಸ್ಟರ್) ಎಸೆಯುವುದಾಗಿತ್ತು. ಮೂರನೆಯದು- ಸಂಸತ್ತಿಗೆ ನುಗ್ಗಿ ಎಲ್ಲ ಸಂಸದರಿಗೂ ಕರಪತ್ರ ಹಂಚುವುದಾಗಿತ್ತು’ ಎಂದಿದ್ದಾರೆ.‘ಆದರೆ, ಮೈಗೆ ಬೆಂಕಿ ಹಚ್ಚಿಕೊಂಡು ಗಮನ ಸೆಳೆಯುವ ನಮ್ಮ ಸಂಚನ್ನು ಕೈಬಿಟ್ಟೆವು. ಏಕೆಂದರೆ ''''''''ಅಗ್ನಿಶಾಮಕ ಜೆಲ್'''''''' (ಅಗ್ನಿನಿರೋಧಕ ಜೆಲ್‌) ಸಿಗಲಿಲ್ಲ. ಅಗ್ನಿನಿರೋಧಕ ಜೆಲ್‌ ಹಚ್ಚಿಕೊಂಡರೆ ಮೈಗೆ ಹೆಚ್ಚು ಸುಟ್ಟ ಗಾಯಗಳು ಆಗುವುದಿಲ್ಲ. ಆದರೆ ಆ ಜೆಲ್‌ ಸಿಗದ ಕಾರಣ ಬೆಂಕಿ ಹಚ್ಚಿಕೊಳ್ಳುವ ಸಂಚು ಕೈಗೂಡಲಿಲ್ಲ’ ಎಂದು ಮುಖ್ಯ ಆರೋಪಿ ಲಲಿತ್‌ ಝಾ ಸೇರಿ ಐವರು ವಿಚಾರಣೆ ವೇಳೆ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಬೈಲ್‌ ಸುಟ್ಟಿದ್ದೇನೆ- ಝಾ:

ಈ ನಡುವೆ, ತನ್ನ ಚಟುವಟಿಕೆಗಳ ಸಾಕ್ಷ್ಯಗಳಿದ್ದ ಮೊಬೈಲ್‌ ಹಾಗೂ ಇತರ ತನ್ನ ಸಹಚರರ ಮೊಬೈಲ್‌ಗಳನ್ನು ಸಾಕ್ಚ್ಯ ನಾಶ ಮಾಡುವ ಉದ್ದೇಶದಿಂದ ಸುಟ್ಟಿದ್ದೇನೆ ಎಂದು ವಿಚಾರಣೆ ವೇಳೆ ಝಾ ಹೇಳಿದ್ದಾನೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಝಾನನ್ನು ಎಲ್ಲ ಸಹಚರರು ‘ಮಾಸ್ಟರ್‌ ಜಿ’ ಎಂದು ಸಂಬೋಧಿಸುತ್ತಿದ್ದರು ಎಂದೂ ಪೊಲೀಸರು ಹೇಳಿದ್ದಾರೆ.

-----ಸಂಸತ್ತಿನಲ್ಲಿ ದಾಳಿ

ಮರುಸೃಷ್ಟಿಮಾಡಲುಪೊಲೀಸರ ನಿರ್ಧಾರನವದೆಹಲಿ: ನೂತನ ಸಂಸತ್‌ ಭವನದ ಒಳಗೆ ಹೊಗೆ ಬಾಂಬ್ ದಾಳಿ ನಡೆಸಿದ ಪ್ರಕರಣವನ್ನು ಕುರಿತು ಮತ್ತಷ್ಟು ಕೂಲಂಕಷವಾಗಿ ತನಿಖೆ ಮಾಡುವ ನಿಟ್ಟಿನಲ್ಲಿ ಘಟನೆಯ ಮರುಸೃಷ್ಟಿಗೆ ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸತ್ತಿನ ಆವರಣಕ್ಕೆ ಆರೋಪಿಗಳನ್ನ ಕರೆತಂದು ಘಟನೆಯ ಮರುಸೃಷ್ಟಿ ಮಾಡಲು ದೆಹಲಿ ಪೊಲೀಸರು ಸಂಸತ್‌ ಸಚಿವಾಲಯದ ಅನುಮತಿ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.

------ಲಲಿತ್‌ ಝಾಗೆ ಆಶ್ರಯನೀಡಿದ 6ನೇ ಆರೋಪಿಮಹೇಶ್‌ ಅರೆಸ್ಟ್‌ನವದೆಹಲಿ: ಸಂಸತ್‌ ದಾಳಿ ಪ್ರಕರಣದ 6ನೇ ಆರೋಪಿ ಮಹೇಶ್‌ ಕುಮಾವತ್‌ ಎಂಬಾತನನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈತ ಲಲಿತ್‌ ಝಾನೊಂದಿಗೆ ಗುರುವಾರವೇ ಶರಣಾಗಿದ್ದರೂ ದೀರ್ಘಕಾಲ ವಿಚಾರಣೆ ನಡೆಸಿ ನಂತರ ಬಂಧಿಸಲಾಗಿದೆ. ಮಹೇಶ್‌, ರಾಜಸ್ಥಾನದ ನಾಗೌರ್‌ ನಿವಾಸಿಯಾಗಿದ್ದು, ಸಂಸತ್‌ ದಾಳಿಯ ಬಳಿಕ ಲಲಿತ್‌ಗೆ ಈತ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದ.

ವಿವರ 7

------ದಾಳಿ ತನಿಖೆಗೆ ಉನ್ನತ ಸಮಿತಿರಚನೆ: ಸ್ಪೀಕರ್‌ನವದೆಹಲಿ: ಸಂಸತ್ತಿನ ಮೇಲಿನ ಹೊಗೆ ಬಾಂಬ್‌ ದಾಳಿಯ ತನಿಖೆಗಾಗಿ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ಶೀಘ್ರ ವರದಿ ಸಲ್ಲಿಸಲಿದ್ದು, ಅದರ ಎಲ್ಲ ಅಂಶಗಳನ್ನು ಸಂಸದರ ಜತೆ ಹಂಚಿಕೊಳ್ಳಲಾಗುತ್ತದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಶನಿವಾರ ಎಲ್ಲಾ ಸಂಸದರಿಗೆ ಪತ್ರ ಬರೆದು ತಿಳಿಸಿದ್ದಾರೆ.

ವಿವರ 7-----ದಾಳಿಗೆ ನಿರುದ್ಯೋಗ ಸಮಸ್ಯೆ ಕಾರಣಪ್ರಧಾನಿ ನರೇಂದ್ರ ಮೋದಿಯವರ ನೀತಿಗಳಿಂದ ದೇಶದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಇನ್ನೊಂದೆಡೆ ಬೆಲೆಯೇರಿಕೆ ಸಮಸ್ಯೆ ತಾಂಡವವಾಡುತ್ತಿದೆ. ಹೀಗಾಗಿ ಸಂಸತ್ತಿನ ಮೇಲೆ ದಾಳಿಗೆ ಬೆಲೆಯೇರಿಕೆ ಮತ್ತು ನಿರುದ್ಯೋಗವೇ ಕಾರಣ.- ರಾಹುಲ್‌ ಗಾಂಧಿಕಾಂಗ್ರೆಸ್‌ ಸಂಸದ