ವಾರ್ಷಿಕ ಸಂಸದ ರತ್ನ ಪ್ರಶಸ್ತಿಗೆ ಶ್ರೀಕಾಂತ್‌ ಸೇರಿ ಐವರ ಆಯ್ಕೆ

| Published : Jan 08 2024, 01:45 AM IST / Updated: Jan 08 2024, 01:04 PM IST

ವಾರ್ಷಿಕ ಸಂಸದ ರತ್ನ ಪ್ರಶಸ್ತಿ

ಸಾರಾಂಶ

ವಾರ್ಷಿಕ ಸಂಸದ ರತ್ನ ಪ್ರಶಸ್ತಿಗೆ ಐವರನ್ನು ಆಯ್ಕೆ ಮಾಡಲಾಗಿದ್ದು, ಅದನ್ನು ಫೆ.17ರಂದು ಪ್ರದಾನ ಮಾಡಲಾಗುತ್ತದೆ. ಅಲ್ಲದೆ ಸುಪ್ರಿಯಾ ಸೇರಿ ಮೂವರಿಗೆ ಉತ್ಕೃಷ್ಟ ಮಾನರತ್ನ ಪ್ರಶಸ್ತಿ ಕೂಡ ನೀಡಿ ಗೌರವಿಸಲಾಗುತ್ತದೆ. 

ನವದೆಹಲಿ: ಚೆನ್ನೈನ ಪ್ರೈಮ್‌ ಪಾಯಿಂಟ್‌ ಫೌಂಡೇಶನ್‌ ನೀಡುವ ವಾರ್ಷಿಕ ಸಂಸದ ರತ್ನ ಪ್ರಶಸ್ತಿಗೆ ಬಿಜೆಪಿಯ ಇಬ್ಬರೂ ಸೇರಿದಂತೆ ಒಟ್ಟು ಐದು ಮಂದಿಯನ್ನು ಆಯ್ಕೆ ಮಾಡಿದೆ. ಬಿಜೆಪಿಯ ಸುಕಾಂತ ಮಜುಂದಾರ್‌ ಮತ್ತು ಸುಧೀರ್‌ ಗುಪ್ತಾ, ಶಿವಸೇನೆಯ ಶ್ರೀಕಾಂತ್‌ ಏಕನಾಥ್‌ ಶಿಂಧೆ, ಎನ್‌ಸಿಪಿಯ ಅಮೋಲ್‌ ರಾಮ್‌ಸಿಂಗ್‌ ಕೋಲ್ಹೆ ಮತ್ತು ಕಾಂಗ್ರೆಸ್‌ನ ಕುಲ್ದೀಪ್‌ ರಾಯ್‌ ಶರ್ಮಾ ಅವರನ್ನು ಸಂಸದೀಯ ವ್ಯವಹಾರಗಳ ಸಚಿವ ಅರ್ಜುನ್‌ ರಾಮ್‌ ಮೇಘಾವಾಲ್‌ ನೇತೃತ್ವದ ಆಯ್ಕೆ ಸಮಿತಿ ಆರಿಸಿದೆ. 

ಜೊತೆಗೆ 17ನೇ ಲೋಕಸಭೆ ಅವಧಿಗೆ ಉತ್ಕೃಷ್ಟ ಸೇವೆ ಸಲ್ಲಿಸಿದ ಸಂಸದರಿಗೆ ನೀಡಲಾಗುವ ಸಂಸದ ಮಹಾರತ್ನ ಪ್ರಶಸ್ತಿಗೆ ಆರ್‌ಎಸ್‌ಪಿಯ ಪ್ರೇಮ್‌ಚಂದ್ರನ್‌, ಕಾಂಗ್ರೆಸ್‌ನ ಅಧೀರ್‌ ರಂಜನ್‌ ಚೌಧರಿ, ಬಿಜೆಪಿಯ ಬಿದ್ಯುತ್‌ ಬರನ್‌ ಮಹತೊ ಮತ್ತು ಹೇನಾ ವಿಜಯಕುಮಾರ್‌ ಗವಿತ್‌ ಅವರನ್ನು ಆಯ್ಕೆ ಮಾಡಲಾಗಿದೆ. 

ಅಲ್ಲದೆ 16ನೇ ಲೋಕಸಭಾ ಅವಧಿಯಲ್ಲಿ ಸಂಸದ ಮಹಾರತ್ನ ಪ್ರಶಸ್ತಿ ಪಡೆದಿದ್ದ ಸುಪ್ರಿಯಾ ಸುಳೆ, ಶ್ರೀರಂಗ್‌ ಅಪ್ಪ ಬಾರ್ನೆ ಮತ್ತು ಭರ್ತೃಹರಿ ಮಹತಾಬ್‌ ಅವರು ಈ ಅವಧಿಯಲ್ಲೂ ಉತ್ತಮವಾಗಿ ನಿರ್ವಹಿಸಿದ ಕಾರಣ ಅವರಿಗೆ ಉತ್ಕೃಷ್ಟ ಮಾನರತ್ನ ಪ್ರಶಸ್ತಿ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಕರ್ನಾಟಕದ ಗದ್ದಿಗೌಡರ್‌ ಸಮಿತಿ ಸಂಸದ ಮಹಾರತ್ನ ಪ್ರಶಸ್ತಿಗೆ ಆಯ್ಕೆ

ನವದೆಹಲಿ: ಕರ್ನಾಟಕದ ಪಿ.ಸಿ ಗದ್ದಿಗೌಡರ್‌ ಅಧ್ಯಕ್ಷರಾಗಿರುವ ಸಂಸದೀಯ ಕೃಷಿ ಸಮಿತಿಯೂ ಸೇರಿದಂತೆ ಮೂರು ಸಮಿತಿಗಳು ಸಂಸದ ಮಹಾರತ್ನ ಪ್ರಶಸ್ತಿಗೆ ಆಯ್ಕೆಯಾಗಿವೆ.ಈ ಪ್ರಶಸ್ತಿಯನ್ನು ಲೋಕಸಭೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಸಂಸದೀಯ ಸಮಿತಿಗಳಿಗೆ ಪಂಚವಾರ್ಷಿಕವಾಗಿ ನೀಡಲಾಗುತ್ತದೆ. 

ಪ್ರಸಕ್ತ ಸಾಲಿನಲ್ಲಿ ಗದ್ದಿಗೌಡರ್‌ ನೇತೃತ್ವದ ಕೃಷಿ ಸಮಿತಿಯ ಜೊತೆಗೆ, ಜಯಂತ್‌ ಸಿನ್ಹಾ ನೇತೃತ್ವದ ಹಣಕಾಸು ಸಮಿತಿ ಮತ್ತು ವಿಜಯಸಾಯಿ ರೆಡ್ಡಿ ನೇತೃತ್ವದ ಸಾರಿಗೆ ಮತ್ತು ಪ್ರವಾಸೋದ್ಯಮ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. 

ಈ ಪ್ರಶಸ್ತಿಯನ್ನು ನವದೆಹಲಿಯಲ್ಲಿ ಫೆ.17ರಂದು ಪ್ರದಾನ ಮಾಡಲಾಗುತ್ತದೆ.- ಸಂಸದೀಯ ಸಮಿತಿಗಳಿಗೆ ನೀಡಲಾಗುವ ಪ್ರಶಸ್ತಿನವದೆಹಲಿ: ಕರ್ನಾಟಕದ ಪಿ.ಸಿ ಗದ್ದಿಗೌಡರ್‌ ಅಧ್ಯಕ್ಷರಾಗಿರುವ ಸಂಸದೀಯ ಕೃಷಿ ಸಮಿತಿಯೂ ಸೇರಿದಂತೆ ಮೂರು ಸಮಿತಿಗಳು ಸಂಸದ ಮಹಾರತ್ನ ಪ್ರಶಸ್ತಿಗೆ ಆಯ್ಕೆಯಾಗಿವೆ.

ಈ ಪ್ರಶಸ್ತಿಯನ್ನು ಲೋಕಸಭೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಸಂಸದೀಯ ಸಮಿತಿಗಳಿಗೆ ಪಂಚವಾರ್ಷಿಕವಾಗಿ ನೀಡಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಗದ್ದಿಗೌಡರ್‌ ನೇತೃತ್ವದ ಕೃಷಿ ಸಮಿತಿಯ ಜೊತೆಗೆ, ಜಯಂತ್‌ ಸಿನ್ಹಾ ನೇತೃತ್ವದ ಹಣಕಾಸು ಸಮಿತಿ ಮತ್ತು ವಿಜಯಸಾಯಿ ರೆಡ್ಡಿ ನೇತೃತ್ವದ ಸಾರಿಗೆ ಮತ್ತು ಪ್ರವಾಸೋದ್ಯಮ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯನ್ನು ನವದೆಹಲಿಯಲ್ಲಿ ಫೆ.17ರಂದು ಪ್ರದಾನ ಮಾಡಲಾಗುತ್ತದೆ.