ಸಾರಾಂಶ
ನವದೆಹಲಿ: ಉಪಗ್ರಹ ಆಧರಿತ ಇಂಟರ್ನೆಟ್ ಸೇವೆ ನೀಡುವ ಎಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್‌ಗೆ ಭಾರತದಲ್ಲಿ ಸೇವೆ ನೀಡುವುದಕ್ಕೆ ಅವಕಾಶ ನೀಡಿರುವುದನ್ನು ಕಾಂಗ್ರೆಸ್ ವಿರೋಧಿಸಿದೆ.
ಜೈರಾಂ ಕಿಡಿ : ನವದೆಹಲಿ: ಉಪಗ್ರಹ ಆಧರಿತ ಇಂಟರ್ನೆಟ್ ಸೇವೆ ನೀಡುವ ಎಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್‌ಗೆ ಭಾರತದಲ್ಲಿ ಸೇವೆ ನೀಡುವುದಕ್ಕೆ ಅವಕಾಶ ನೀಡಿರುವುದನ್ನು ಕಾಂಗ್ರೆಸ್ ವಿರೋಧಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘12 ಗಂಟೆಯೊಳಗೆ ಏರ್‌ಟೆಲ್ ಮತ್ತು ಜಿಯೋ ಎರಡೂ ಕಂಪನಿಗಳು ಸ್ಟಾರ್‌ಲಿಂಕ್ ಜೊತೆಗೆ ತಮ್ಮ ಪಾಲುದಾರಿಕೆ ಘೋಷಿಸಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮೆಚ್ಚಿಸುವ ಸಲುವಾಗಿಯೇ ಸ್ವತಃ ಪ್ರಧಾನಿ ನರೇಂದ್ರ ಮೋದಿ ಈ ಒಪ್ಪಂದ ಕುದುರಿಸಿದ್ದಾರೆ ಎನ್ನುವುದು ಸ್ಪಷ್ಟ’ ಎಂದಿದ್ದಾರೆ.
ಜೊತೆಗೆ ‘ರಾಷ್ಟ್ರೀಯ ಭದ್ರತೆಗೆ ಅಗತ್ಯವಿರುವಾಗ ಸಂಪರ್ಕ ಆನ್ ಅಥವಾ ಆಫ್ ಮಾಡುವ ಅಧಿಕಾರ ಸ್ಟಾರ್‌ಲಿಂಕ್ ಅಥವಾ ಭಾರತೀಯ ಪಾಲುದಾರರಿಗೆ ಇರಲಿದೆಯೇ?ಇತರ ಉಪಗ್ರಹ ಆಧಾರಿತ ಸಂಪರ್ಕ ಪೂರೈಕೆದಾರರಿಗೂ ಅನುಮತಿ ನೀಡಲಾಗುತ್ತದೆಯೇ?’ ಎಂದು ಜೈರಾಂ ಪ್ರಶ್ನಿಸಿದ್ದಾರೆ.