ಇಸ್ರೇಲಲ್ಲಿ ಮೃತ ಮ್ಯಾಕ್ಸ್‌ವೆಲ್‌ ದೇಹ ಭಾರತಕ್ಕೆ ಆಗಮನ

| Published : Mar 09 2024, 01:32 AM IST

ಸಾರಾಂಶ

ಇಸ್ರೇಲ್‌ನಲ್ಲಿ ಮೃತಪಟ್ಟ ಪಟ್ನಿಬಿನ್‌ ಮ್ಯಾಕ್ಸ್‌ವೆಲ್‌ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲಾಗಿದ್ದು, ಶನಿವಾರ ಸಂಜೆ ಕೇರಳದ ಕೊಲ್ಲಂನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ತಿರುವನಂತಪುರಂ: ಇತ್ತೀಚೆಗೆ ಇಸ್ರೇಲ್‌ನಲ್ಲಿ ಲೆಬನಾನ್‌ ದಾಳಿಗೆ ಮೃತಪಟ್ಟ ಭಾರತೀಯ ಪಟ್ನಿಬಿನ್‌ ಮ್ಯಾಕ್ಸ್‌ವೆಲ್‌ ಪಾರ್ಥಿವ ಶರೀರವನ್ನು ಶುಕ್ರವಾರ ಸಂಜೆ ಏರ್‌ ಇಂಡಿಯಾ ವಿಮಾನದ ಮೂಲಕ ತವರಿಗೆ ತರಲಾಗಿದೆ.

ಈ ವೇಳೆ ವಿದೇಶಾಂಗ ವ್ಯವಹಾರಗಳ ಇಲಾಖೆ ರಾಜ್ಯ ಸಚಿವ ಮುರಳೀಧರನ್‌ ಹಾಜರಿದ್ದು, ಪಾರ್ಥಿವ ಶರೀರವನ್ನು ಬರಮಾಡಿಕೊಂಡರು.

ಬಳಿಕ ಅವರ ಕುಟುಂಬಸ್ಥರು ಮೆರವಣಿಗೆಯಲ್ಲಿ ಮೃತದೇಹವನ್ನು ಅವರ ತವರಾದ ಕೊಲ್ಲಂಗೆ ಮೆರವಣಿಗೆಯಲ್ಲಿ ಕೊಂಡೊಯ್ದರು.

ಈ ವೇಳೆ ಹಾಜರಿದ್ದ ಇಸ್ರೇಲ್‌ ದೂತಾವಾಸ ಮುಖ್ಯಸ್ಥೆ ತಮ್ಮಿ ಬೆನ್‌ ಹೈಮ್‌ ಇಸ್ರೇಲ್‌ ಸರ್ಕಾರದೊಂದಿಗೆ ಸಮಾಲೋಚಿಸಿ ಪಟ್ನಿಬಿನ್‌ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.