ಸಾರಾಂಶ
ಆಂಧ್ರಪ್ರದೇಶದಲ್ಲಿ ತಮ್ಮ ಜನಸೇನಾ ಪಕ್ಷವನ್ನು ಸಂಘಟಿಸುವ ಜೊತೆಗೆ ಬಿಜೆಪಿ ಹಾಗೂ ಟಿಡಿಪಿಯನ್ನು ಒಗ್ಗೂಡಿಸಿ ಎನ್‌ಡಿಎ ಸರ್ಕಾರಕ್ಕೆ ಭಾರೀ ಬಹುಮತ ಬರುವಲ್ಲಿ ಶ್ರಮಿಸಿದ್ದ ಟಾಲಿವುಡ್‌ನ ಚಾಲೆಂಜಿಂಗ್ ಸ್ಟಾರ್ ಪವನ್ ಕಲ್ಯಾಣ್‌ರನ್ನು ರಾಜ್ಯದ ಉಪಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ.
ಅಮರಾವತಿ: ಆಂಧ್ರಪ್ರದೇಶದಲ್ಲಿ ತಮ್ಮ ಜನಸೇನಾ ಪಕ್ಷವನ್ನು ಸಂಘಟಿಸುವ ಜೊತೆಗೆ ಬಿಜೆಪಿ ಹಾಗೂ ಟಿಡಿಪಿಯನ್ನು ಒಗ್ಗೂಡಿಸಿ ಎನ್‌ಡಿಎ ಸರ್ಕಾರಕ್ಕೆ ಭಾರೀ ಬಹುಮತ ಬರುವಲ್ಲಿ ಶ್ರಮಿಸಿದ್ದ ಟಾಲಿವುಡ್‌ನ ಚಾಲೆಂಜಿಂಗ್ ಸ್ಟಾರ್ ಪವನ್ ಕಲ್ಯಾಣ್‌ರನ್ನು ರಾಜ್ಯದ ಉಪಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ.
ಪವನ್ ಕಲ್ಯಾಣ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನದ ಜೊತೆಗೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಪರಿಸರ, ಅರಣ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ನೀಡಲಾಗಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಅವರಿಗೆ ಮಾನವ ಸಂಪನ್ಮೂಲ, ಮಾಹಿ ತಂತ್ರಜ್ಞಾನ ಮತ್ತು ಸಂವಹನ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಅನಿತಾ ವಂಗಲಪುಡಿ ಅವರಿಗೆ ಮಹತ್ವದ ಗೃಹ ಖಾತೆ ನೀಡಲಾಗಿದೆ.
2024ರ ವಿಧಾನಸಭಾ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಅವರ ಪಕ್ಷ ಸ್ಪರ್ಧಿಸಿದ್ದ ಎಲ್ಲ 21 ಕ್ಷೇತ್ರಗಳಲ್ಲಿ ಹಾಗೂ 2 ಲೋಕಸಭೆ ಕ್ಷೇತ್ರಗಳಲ್ಲಿ ಗೆದ್ದಿತ್ತು.