ಸಾರಾಂಶ
ಪೇಟಿಎಂ ಬ್ಯಾಂಕ್ ನಿರ್ಬಂಧ ಇಂದಿನಿಂದ ಜಾರಿಗೆ ಬರಲಿದೆ. ಆದರೂ ಅದರ ಖಾತೆಯಲ್ಲಿ ಮತ್ತು ವಿವಿಧ ವ್ಯಾಲೆಟ್‌ಗಳಲ್ಲಿರುವ ಹಣವನ್ನು ಅದು ಖಾಲಿಯಾಗುವವರೆಗೂ ಖರ್ಚು ಮಾಡಲು ಅವಕಾಶವಿದೆ.
ಪಿಟಿಐ ಮುಂಬೈ
ಕೆವೈಸಿ ಅಕ್ರಮದ ಕಾರಣ ಪೇಟಿಎಂ ಪೇಮೆಂಟ್ ಬ್ಯಾಂಕ್ ಸೇವೆಗಳು ಮಾ.15ರಿಂದ ನಿರ್ಬಂಧಕ್ಕೆ ಒಳಪಡುತ್ತಿವೆ.ಆದರೆ ಜನರು ಖರೀದಿ ಹಾಗೂ ಇತರ ಹಣಕಾಸು ವಹಿವಾಟು ವೇಳೆ ಬಳಸುವ ಪೇಟಿಎಂ ಯುಪಿಐ ಆ್ಯಪ್ ಸೇವೆ ಅಬಾಧಿತವಾಗಿ ಮುಂದುವರಿಯಲಿದೆ.
ಪೇಟಿಎಂ ಆ್ಯಪ್‌ಗೆ ಯೆಸ್ ಬ್ಯಾಂಕ್ ಜತೆ ಒಪ್ಪಂದಕ್ಕೆ ಎನ್‌ಪಿಸಿಐ ಅನುಮತಿ ನೀಡಿದ್ದು, ಪೇಟಿಎಂ ಬಳಕೆದಾರರು ಕಳಿಸುವ ಹಣದ ವ್ಯವಹಾರ ಯೆಸ್ ಬ್ಯಾಂಕ್ ಮೂಲಕ ನಡೆಯುತ್ತದೆ.ಹೀಗಾಗಿ ಪೇಟಿಎಂ ಸೇವೆ ಅಬಾಧೀತವಾಗಲಿದೆ. ಈವರೆಗೆ ಪೇಟಿಎಂ ಆ್ಯಪ್ ಸೇವೆ ನಿರ್ಬಂಧಕ್ಕೆ ಒಳಗಾದ ಪೇಟಿಎಂ ಪೇಮೆಂಟ್ ಬ್ಯಾಂಕ್ ಮೂಲಕ ನಡೆಯುತ್ತಿತ್ತು.