ಮಧ್ಯಪ್ರದೇಶದ ಧಾರ್‌ ಜಿಲ್ಲೆಯಲ್ಲಿರುವ 11ನೇ ಶತಮಾನದ ವಿವಾದಾತ್ಮಕ ಭೋಜಶಾಲಾ-ಕಮಲ್‌ ಮೌಲಾ ಮಸೀದಿ ಕಟ್ಟಡದಲ್ಲಿ ವಸಂತ ಪಂಚಮಿ ಹಿನ್ನೆಲೆಯಲ್ಲಿ ಹಿಂದೂಗಳು ಪೂಜೆ ಪುನಸ್ಕಾರ ಮತ್ತು ಮುಸ್ಲಿಮರು ಪ್ರತ್ಯೇಕವಾಗಿ ನಮಾಜ್‌ ಮಾಡುವ ಶುಕ್ರವಾರ ತಮ್ಮ ತಮ್ಮ ಧಾರ್ಮಿಕ ಆಚರಣೆಯನ್ನು ಶಾಂತಿಯುತವಾಗಿ ಪಾಲಿಸಿದರು.

- ಸುಪ್ರೀಂ ನಿರ್ದೇಶನದಂತೆ ನಡೆದ ಧಾರ್ಮಿಕ ಆಚರಣೆ

ಧಾರ್‌: ಮಧ್ಯಪ್ರದೇಶದ ಧಾರ್‌ ಜಿಲ್ಲೆಯಲ್ಲಿರುವ 11ನೇ ಶತಮಾನದ ವಿವಾದಾತ್ಮಕ ಭೋಜಶಾಲಾ-ಕಮಲ್‌ ಮೌಲಾ ಮಸೀದಿ ಕಟ್ಟಡದಲ್ಲಿ ವಸಂತ ಪಂಚಮಿ ಹಿನ್ನೆಲೆಯಲ್ಲಿ ಹಿಂದೂಗಳು ಪೂಜೆ ಪುನಸ್ಕಾರ ಮತ್ತು ಮುಸ್ಲಿಮರು ಪ್ರತ್ಯೇಕವಾಗಿ ನಮಾಜ್‌ ಮಾಡುವ ಶುಕ್ರವಾರ ತಮ್ಮ ತಮ್ಮ ಧಾರ್ಮಿಕ ಆಚರಣೆಯನ್ನು ಶಾಂತಿಯುತವಾಗಿ ಪಾಲಿಸಿದರು.

ವಸಂತ ಪಂಚಮಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಆರಂಭವಾದ ಪೂಜೆ ಸಂಜೆ ವರೆಗೂ ಬಿಗಿಭದ್ರತೆಯಲ್ಲಿ ನಡೆಯಿತು. ಅದೇ ರೀತಿ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಮುಸ್ಲಿಮರು ತಮಗೆ ಸೂಚಿಸಲಾದ ಪ್ರತ್ಯೇಕ ಜಾಗದಲ್ಲಿ ಮಧ್ಯಾಹ್ನ 1ರಿದ 3ರ ವರೆಗೆ ನಮಾಜ್‌ ಸಲ್ಲಿಸಿದರು

ಈ ವಿವಾದಾತ್ಮಕ ಜಾಗದಲ್ಲಿ ಹಿಂದೂ-ಮುಸ್ಲಿಮರು ಒಂದೇ ದಿನ ತಮ್ಮ ಆಚರಣೆಗಳನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 8 ಸಾವಿರಕ್ಕೂ ಹೆಚ್ಚು ಪೊಲೀಸರು, ಪ್ಯಾರಾ ಮಿಟಿಟರಿ ಸಿಬ್ಬಂದಿಯನ್ನು ನಗರದಲ್ಲಿ ನಿಯೋಜಿಸಲಾಗಿತ್ತು.

ಈ ಬಾರಿ ವಸಂತ ಪಂಚಮಿ ಶುಕ್ರವಾರ ಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಹಿಂದೂ ಮತ್ತು ಮುಸ್ಲಿಮರಿಗೆ ಪ್ರತ್ಯೇಕವಾಗಿ ಒಂದೇ ಕಟ್ಟಡದಲ್ಲಿ ತಮ್ಮ ತಮ್ಮ ಧಾರ್ಮಿಕ ಆಚರಣೆ ಪಾಲಿಸಲು ಅವಕಾಶ ನೀಡಲಾಗಿತ್ತು.

ಹಿಂದೂ ಸಮುದಾಯದವರು ಭೋಜಶಾಲಾವನ್ನು ಸರಸ್ವತಿ ದೇವಿಯ ದೇಗುಲ ಎಂದು ಪರಿಗಣಿಸಿದ್ದರೆ, ಮುಸ್ಲಿಮರು ಕಮಾಲ್‌ ಮೌಲಾ ಮಸೀದಿ ಎಂದು ಕರೆಯುತ್ತಾರೆ. ಈ ಕಟ್ಟಡ ಸದ್ಯ ಭಾರತೀಯ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಟ್ಟಿದೆ.