ಸಾರಾಂಶ
ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯ ನೊಹ್ಜಾಂಗ್ ಕಿಪ್ಜೆನ್ ಆಟದ ಮೈದಾನದಲ್ಲಿ ಯುವಕರ ಗುಂಪೊಂದು ಮಷಿನ್ ಗನ್ ಹಿಡಿದು ಫುಟ್‌ಬಾಲ್ ಆಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯ ನೊಹ್ಜಾಂಗ್ ಕಿಪ್ಜೆನ್ ಆಟದ ಮೈದಾನದಲ್ಲಿ ಯುವಕರ ಗುಂಪೊಂದು ಮಷಿನ್ ಗನ್ ಹಿಡಿದು ಫುಟ್‌ಬಾಲ್ ಆಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಂಬಿ ರೋಮಿಯೋ ಹಾನ್ಸಾಂಗ್ ಎಂಬುವವರು ತಮ್ಮ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿ, ‘ಕುಕಿಗಳು’ ಎಂದು ಹ್ಯಾಷ್‌ಟ್ಯಾಗ್ ಬಳಸಿದ್ದರು.
ಬಳಿಕ ಹ್ಯಾಷ್‌ಟ್ಯಾಗ್ ತೆಗೆದು, ಮಷಿನ್ ಗನ್ ಕಾಣುತ್ತಿದ್ದ ವಿಡಿಯೋದ ಭಾಗವನ್ನು ಕತ್ತರಿಸಿ ಪುನಃ ಪೋಸ್ಟ್ ಮಾಡಿದ್ದಾರೆ. ಆದರೆ ಮೂಲ ವಿಡಿಯೋ ಸಾಕಷ್ಟು ಹರಿದಾಡಿದೆ. ಮೈತೇಯಿ ಸಮುದಾಯದ ನಾಗರಿಕ ಸಮಾಜ ಸಂಘಟನೆಯು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಈ ಕುರಿತು ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದೆ.