ಸಾರಾಂಶ
ಅಮೆರಿಕದ ಹಾಲಿ ಉಪಾಧ್ಯಕ್ಷೆಯೂ ಆಗಿರುವ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಗೆಲುವಿಗೆ ಅವರ ಪೂರ್ವಿಕರ ನೆಲೆಯಾದ ತಮಿಳುನಾಡಿನ ತುಳಸೇಂದ್ರಪುರಂ ಗ್ರಾಮದ ನಿವಾಸಿಗಳು ಪೂಜೆ, ಪ್ರಾರ್ಥನೆ ಆರಂಭಿಸಿದ್ದಾರೆ.
ಪಿಟಿಐ ತಿರುವರೂರು (ತಮಿಳುನಾಡು)
ಅಮೆರಿಕದ ಹಾಲಿ ಉಪಾಧ್ಯಕ್ಷೆಯೂ ಆಗಿರುವ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಗೆಲುವಿಗೆ ಅವರ ಪೂರ್ವಿಕರ ನೆಲೆಯಾದ ತಮಿಳುನಾಡಿನ ತುಳಸೇಂದ್ರಪುರಂ ಗ್ರಾಮದ ನಿವಾಸಿಗಳು ಪೂಜೆ, ಪ್ರಾರ್ಥನೆ ಆರಂಭಿಸಿದ್ದಾರೆ.ಕಮಲಾ ಅವರ ಗೆಲುವಿಗೆ ಗ್ರಾಮಸ್ಥರು ವಿವಿಧ ದೇವರಿಗೆ ಮೊರೆ ಹೋಗಿದ್ದಾರೆ. ಮಂಗಳವಾರರ ಮತದಾನದಲ್ಲಿ ಟ್ರಂಪ್ ಸೋಲಿಸಿ ಅಧ್ಯಕ್ಷ ಗದ್ದುಗೆ ಏರುವಂತೆ ಗ್ರಾಮದ ಶ್ರೀ ಧರ್ಮಶಾಸ್ತ್ರ ದೇಗುಲದಲ್ಲಿ ಪ್ರಾರ್ಥಿಸಿದರು.
‘ಅಮೆರಿಕ ಚುನಾವಣೆಯಲ್ಲಿ ಈ ಮಣ್ಣಿನ ಮಗಳು ಗೆದ್ದು ಜಗತ್ತಿನ ಅತ್ಯಂತ ಪ್ರಭಾವಿ ರಾಷ್ಟ್ರದ ಅಧ್ಯಕ್ಷರಾಗಬೇಕು ಎಂದು ನಾವು ಪ್ರಾರ್ಥಿಸುತ್ತೇವೆ’ ಎಂದು ಕೌನ್ಸಿಲರ್ ಅರುಲ್ಮೋಳಿ ಮತ್ತು ಅವರ ಪತಿ ಟಿ.ಸುಧಾಕರ್ ಹೇಳಿದರು. ಇವರು ಕಮಲಾ ಅವರ ಗೆಲುವಿಗಾಗಿ ಅವರ ಪೂರ್ವಜರ ಕುಲದೈವ ಶ್ರೀ ಧರ್ಮ ಶಾಸ್ತ್ರ ದೇವಸ್ಥಾನದಲ್ಲಿ ವಿಶೇಷ ಅರ್ಚನೆ, ಶ್ರೀಗಂಧ ಮತ್ತು ಅರಿಶಿಣದ ವಿಶೇಷ ಅಭಿಷೇಕ ಆಯೋಜಿಸಿದ್ದರು.ಮದುರೈನಲ್ಲಿ ಕಮಲಾ ಅವರ ಭಾವಚಿತ್ರ ಬ್ಯಾನರ್‌ಗಳನ್ನು ಅಂಟಿಸಲಾಗಿದೆ. ಕಮಲಾ ಅವರು ಗೆದ್ದರೆ ಗ್ರಾಮದಲ್ಲಿ ಅನ್ನದಾನ ಮಾಡಲಾಗುವುದು ಎಂದು ಹಲವರು ಹೇಳಿದ್ದಾರೆ.
ಭಾರೀ ನಿರೀಕ್ಷೆ ಮೂಡಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮಂಗಳವಾರ ಮತದಾನ ನಡೆದಿದೆ. ತುಳಸೇಂದ್ರಪುರಂನಲ್ಲಿ ಕಮಲಾ ಅವರ ತಾತ ಪಿ.ವಿ,ಗೋಪಾಲನ್ ಮತ್ತು ತಾಯಿ ಶ್ಯಾಮಲಾ ನೆಲೆಸಿದ್ದರು.