ಸಾರಾಂಶ
ನವದೆಹಲಿ: ಅಹಮದಾಬಾದ್-ಮುಂಬೈ ನಡುವೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಬುಲೆಟ್‌ರೈಲು ಕಾಮಗಾರಿಯ ಮೊದಲ ಹಂತ ಆಗಸ್ಟ್ 2026ರೊಳಗೆ ಪೂರ್ಣವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
50 ಕಿ.ಮೀ ಉದ್ದದ ಬಿಲಿಮೋರ ಮತ್ತು ಸೂರತ್ ನಡುವಿನ ಮಾರ್ಗ
ನವದೆಹಲಿ: ಅಹಮದಾಬಾದ್-ಮುಂಬೈ ನಡುವೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಬುಲೆಟ್‌ರೈಲು ಕಾಮಗಾರಿಯ ಮೊದಲ ಹಂತ ಆಗಸ್ಟ್ 2026ರೊಳಗೆ ಪೂರ್ಣವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.ಈ ಕುರಿತು ಮಾತನಾಡಿದ ಅವರು, ‘50 ಕಿ.ಮೀ ಉದ್ದದ ಬಿಲಿಮೋರ ಮತ್ತು ಸೂರತ್ ನಡುವಿನ ಮಾರ್ಗವನ್ನು ಆಗಸ್ಟ್ 2026ರೊಳಗೆ ಪೂರ್ಣಗೊಳಿಸಲಾಗುವುದು. ಇಲ್ಲಿಯವರೆಗೆ 100 ಕಿ.ಮೀ ಉದ್ದದ ವಯಾಡಕ್ಟ್‌ಗಳು ಮತ್ತು 230 ಕಿ.ಮೀ ಉದ್ದದಷ್ಟು ಜಾಗದಲ್ಲಿ ಕಂಬಗಳನ್ನು ನಿಲ್ಲಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ವಲ್ಸದ್, ನವಸಾರಿ, ಸೂರತ್, ವಡೋದರ ಮತ್ತು ಆನಂದ್ ಜಿಲ್ಲೆಗಳಲ್ಲಿ ವಯಾಡಕ್ಟ್‌ಗಳು ಪೂರ್ಣಗೊಂಡಿವೆ’ ಎಂಬುದಾಗಿ ತಿಳಿಸಿದ್ದಾರೆ. ಬುಲೆಟ್ ರೈಲು ಕಾಮಗಾರಿ 2021ರ ನವೆಂಬರ್‌ನಲ್ಲಿ ಪ್ರಾರಂಭವಾಗಿತ್ತು.