ಕಸಾಯಿಖಾನೆಗೆ ಅಕ್ರಮ ಸಾಗಾಟದ ವೇಳೆ ಪಿಕ್ ಅಪ್ ಪಲ್ಟಿ: ಹಸು ಸಾವು
KannadaprabhaNewsNetwork | Published : Oct 11 2023, 12:45 AM IST
ಕಸಾಯಿಖಾನೆಗೆ ಅಕ್ರಮ ಸಾಗಾಟದ ವೇಳೆ ಪಿಕ್ ಅಪ್ ಪಲ್ಟಿ: ಹಸು ಸಾವು
ಸಾರಾಂಶ
ಚಾಮರಾಜನಗರ:ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕ್ ಅಪ್ ಪಲ್ಟಿಯಾಗಿ ಹಸು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಸಮೀಪ ನಡೆದಿದೆ. ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದ್ದು ಹಸುವೊಂದು ಮೃತಪಟ್ಟಿದೆ, ಎರಡು ಎಮ್ಮೆ, ಎಂಟು ಹಸುಗಳು ಬದುಕುಳಿದಿವೆ.
ಚಾಮರಾಜನಗರ:ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕ್ ಅಪ್ ಪಲ್ಟಿಯಾಗಿ ಹಸು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಸಮೀಪ ನಡೆದಿದೆ. ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದ್ದು ಹಸುವೊಂದು ಮೃತಪಟ್ಟಿದೆ, ಎರಡು ಎಮ್ಮೆ, ಎಂಟು ಹಸುಗಳು ಬದುಕುಳಿದಿವೆ. ಮೈಸೂರಿನಿಂದ ಕೇರಳಕ್ಕೆ ಅಕ್ರಮವಾಗಿ ರಾಸುಗಳು ಸಾಗಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದ್ದು ಘಟನೆ ನಡೆಯುತ್ತಿದ್ದಂತೆ ವಾಹನ ಚಾಲಕ ಪರಾರಿಯಾಗಿದ್ದಾನೆ. ಬದುಕುಳಿದ ರಾಸುಗಳನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದಿದ್ದು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ------- 10ಸಿಎಚ್ಎನ್17 ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕ್ ಅಪ್ ಪಲ್ಟಿಯಾಗಿ ಹಸು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಸಮೀಪ ನಡೆದಿದೆ.