₹29 ಬೆಲೆಯ ‘ಭಾರತ್‌ ಅಕ್ಕಿ’ ಮಾರಾಟಕ್ಕೆ ದೇಶಾದ್ಯಂತ ಚಾಲನೆ

| Published : Feb 07 2024, 01:48 AM IST / Updated: Feb 07 2024, 11:21 AM IST

Rice

ಸಾರಾಂಶ

ಕೇಂದ್ರ ಸರ್ಕಾರದ ಭಾರತ್‌ ಅಕ್ಕಿಗೆ ಸೋಮವಾರ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪಿಯೂಷ್‌ ಗೋಯಲ್‌ ಚಾಲನೆ ನೀಡಿದರು.

ನವದೆಹಲಿ: ಕೇಂದ್ರ ಸರ್ಕಾರದ ಭಾರತ್‌ ಅಕ್ಕಿಗೆ ಸೋಮವಾರ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪಿಯೂಷ್‌ ಗೋಯಲ್‌ ಚಾಲನೆ ನೀಡಿದರು.

ಭಾರತ್‌ ಅಕ್ಕಿ ಅಡಿಯಲ್ಲಿ ಕೇಂದ್ರ ಸರ್ಕಾರ ಜನರಿಗೆ ಕೇಜಿಗೆ 29 ರು.ನಂತೆ ಮಾರಾಟ ಮಾಡಲಿದೆ. ಭಾರತ ಆಹಾರ ನಿಗಮ 5 ಲಕ್ಷ ಟನ್‌ ಅಕ್ಕಿ ನೀಡಲಿದ್ದು, ನ್ಯಾಫೆಡ್‌ ಹಾಗೂ ಎನ್‌ಸಿಸಿಎಫ್‌ ಪ್ಯಾಕ್‌ ಮಾಡಿ 5 ಹಾಗೂ 10 ಕೇಜಿ ತೂಕದ ಬ್ಯಾಗಿನಲ್ಲಿ ಕೇಂದ್ರ ಮಾರಲಿದೆ. 

ಜೊತೆಗೆ 100 ಮೊಬೈಲ್‌ ವಾಹನಗಳಲ್ಲಿ ಮಾರಾಟವಾಗಲಿದೆ.ಚಾಲನೆ ನೀಡಿ ಮಾತನಾಡಿದ ಗೋಯಲ್‌,‘ ಈ ಹಿಂದೆ ಕೇಂದ್ರ ಸರ್ಕಾರ ಗೋಧಿ, ಕಡಲೆ ಹಾಗೂ ಬೇಳೆ ಮೇಲಿನ ಬೆಲೆಯನ್ನು ನಿಯಂತ್ರಿಸಲು ಭಾರತ್‌ ಅಟ್ಟಾ, ಚನ್ನಾ ಹಾಗೂ ದಾಲ್‌ ಮಾರಾಟ ಮಾಡಿತ್ತು. 

ಇದು ಯಶಸ್ವಿಯಾದ ಬಳಿಕ ಇದೀಗ ಭಾರತ್‌ ಅಕ್ಕಿ ಮಾರಾಟ ಮಾಡುತ್ತಿದೆ. ಇದರಿಂದಾಗಿ ದೇಶದಲ್ಲಿ ಅಕ್ಕಿಯ ಬೆಲೆ ಇಳಿಕೆಯಾಗಲಿದೆ ಎಂದು ಹೇಳಿದರು.