ಚುನಾವಣೆಯಿಂದ 6 ವರ್ಷ ಪ್ರಧಾನಿ ಮೋದಿ ನಿಷೇಧ ಕೋರಿದ್ದ ಅರ್ಜಿ ವಜಾ

| Published : May 15 2024, 01:32 AM IST

ಸಾರಾಂಶ

ಕೋಮುದ್ವೇಷ ಭಾಷಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯನ್ನು ಚುನಾವಣೆಯಿಂದ ಆರು ವರ್ಷಗಳ ಕಾಲ ನಿಷೇಧಿಸಬೇಕು ಎಂದು ಕೋರಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧೆಯಿಂದ ನಿಷೇಧಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಈ ರೀತಿ ಅರ್ಜಿಗಳು ಮೊದಲ ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಹೋಗಬೇಕು ಎಂದು ಸೂಚಿಸಿದೆ.

ಫಾತಿಮಾ ಎಂಬುವರು ಪ್ರಧಾನಿ ನರೇಂದ್ರ ಮೋದಿ ಅವರು ದ್ವೇಷ ಭಾಷಣ ಮಾಡುತ್ತಿದ್ದಾರೆ.

ಈ ಮೂಲಕ ಸಮಾಜದಲ್ಲಿ ದ್ವೇಷ ವಾತಾವರಣ ನಿರ್ಮಿಸುತ್ತಿದ್ದಾರೆ.

ಹೀಗಾಗಿ ಅವರನ್ನು ಚುನಾವಣೆಯಿಂದ ನಿಷೇಧ ಹೇರಬೇಕು ಎಂದು ಮನವಿ ಮಾಡಿದ್ದರು.

ಈ ಅರ್ಜಿಯನ್ನು ನ್ಯಾ. ವಿಕ್ರಂನಾಥ್‌ ಹಾಗೂ ನ್ಯಾ.ಎಸ್‌.ಸಿ. ಶರ್ಮ ಅವರಿದ್ದ ಪೀಠ ವಜಾಗೊಳಿಸಿದೆ.