ಸಾರಾಂಶ
ಇದೇ ಮೊದಲ ಬಾರಿ ನಮೀಬಿಯಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಅಲ್ಲಿನ ಅತ್ಯುನ್ನತ ನಾಗರಿಕ ಗೌರವವಾದ ‘ಆರ್ಡರ್ ಆಫ್ ದಿ ಮೋಸ್ಟ್ ಏನ್ಷಿಯೆಂಟ್ ವೆಲ್ವಿಟ್ಶಿಯಾ ಮಿರಾಬಿಲಿಸ್’ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಧಾನಿಗೆ 27ನೇ ಜಾಗತಿಕ ಪ್ರಶಸ್ತಿವಿಂಡ್ಹೋಕ್: ಇದೇ ಮೊದಲ ಬಾರಿ ನಮೀಬಿಯಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಅಲ್ಲಿನ ಅತ್ಯುನ್ನತ ನಾಗರಿಕ ಗೌರವವಾದ ‘ಆರ್ಡರ್ ಆಫ್ ದಿ ಮೋಸ್ಟ್ ಏನ್ಷಿಯೆಂಟ್ ವೆಲ್ವಿಟ್ಶಿಯಾ ಮಿರಾಬಿಲಿಸ್’ ಪ್ರಶಸ್ತಿಯನ್ನು ನೀಡಲಾಗಿದೆ. ನಮೀಬಿಯಾ ಅಧ್ಯಕ್ಷ ನೇತುಂಬೋ ನಂದಿ ದೈತ್ವಾ ಇದನ್ನು ಪ್ರದಾನ ಮಾಡಿದ್ದಾರೆ. ಇದರೊಂದಿಗೆ, ಮೋದಿಯವರಿಗೆ ವಿದೇಶಗಳಲ್ಲಿ ಲಭಿಸಿದ ಅತ್ಯುಚ್ಚ ಗೌರವಗಳ ಸಂಖ್ಯೆ 27 ಆಗಿದೆ. ಮೋದಿ ಅವರು, ನಮೀಬಿಯಾಗೆ ಹೋದ ಭಾರತದ 3ನೇ ಪ್ರಧಾನಿಯಾಗಿದ್ದಾರೆ.