ಸಾರಾಂಶ
ಜನರು ತಮ್ಮ ಸಮಸ್ಯೆ ಬಗ್ಗೆ ಕೇಳಬಯಸುವ ಯಾವುದೇ ವಿಷಯಗಳ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್‌ನಲ್ಲಿ ಜನರ ಸಮಸ್ಯೆಗಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ.
ನವದೆಹಲಿ: ಜನರು ತಮ್ಮ ಸಮಸ್ಯೆ ಬಗ್ಗೆ ಕೇಳಬಯಸುವ ಯಾವುದೇ ವಿಷಯಗಳ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್‌ನಲ್ಲಿ ಜನರ ಸಮಸ್ಯೆಗಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ‘ಇದು ಮೋದಿ ಅವರ ಮೂರನೇ ಅವಧಿ. ಆದರೆ ಪೂರ್ಣ ಸ್ವಂತ ಬಲದಿಂದ ಅಲ್ಲ. ಹೀಗಾಗಿ ಈ ಬಾರಿಯಾದರೂ ಅವರು ಸ್ವಲ್ಪ ಸಂವೇದನಾಶೀಲರಾಗಿ ಇರುತ್ತಾರೆ ಎಂದು ಅಂದುಕೊಂಡಿದ್ದೆವು. ಆದರೆ ಪ್ರಧಾನಿ ಮೋದಿ ಇತ್ತೀಚಿನ ನೀಟ್ ಪ್ರವೇಶ ಪರೀಕ್ಷೆ ಅಕ್ರಮ, ರೈಲ್ವೆ ಅಪಘಾತ, ಮೂಲಸೌಕರ್ಯ ಕುಸಿತ (ಸೇತುವೆ, ಮೇಲ್ಛಾವಣಿ ಕುಸಿತ)ದ ಬಗ್ಗೆ ಪ್ರಸ್ತಾಪಿಸಿಲ್ಲ.’ ಎಂದು ಟೀಕಿಸಿದರು.