ಸಾರಾಂಶ
ಕಾಜಿ಼ರಂಗ (ಅಸ್ಸಾಂ): ಯುನೆಸ್ಕೋ ವಿಶ್ವಪಾರಂಪರಿಕ ತಾಣವಾಗಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೆ ಶನಿವಾರ ಮೊಟ್ಟಮೊದಲ ಬಾರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಆನೆ ಸವಾರಿ ನಡೆಸಿ ಸಂತಸಪಟ್ಟರು.
ಈ ವೇಳೆ ಪ್ರಧಾನಿ ಮೋದಿ ವಿಹಾರಕ್ಕೆ ಹೊಂದಿಕೆಯಾಗುವಂತೆ ಜಾಕೆಟ್ ಮತ್ತು ಬಿಸಿಲು ಟೊಪ್ಪಿಗೆ ಧರಿಸಿ ‘ಪ್ರದ್ಯುಮ್ನ’ ಎಂಬ ಆನೆಯನ್ನು ಮಾವುತ ರಾಜು ಅವರ ಸಹಾಯದೊಂದಿಗೆ ಸವಾರಿ ಮಾಡಿದರು.
ಪ್ರಧಾನಿ ಮೋದಿ ಮುನ್ನಡೆಸುತ್ತಿದ್ದ ಆನೆಯನ್ನು 16 ಆನೆಗಳ ಹಿಂಡು ಹಿಂಬಾಲಿಸಿದ್ದು ಮತ್ತಷ್ಟು ಕಳೆಗಟ್ಟಿತು. ಬಳಿಕ ತಾವು ಸವಾರಿ ಮಾಡಿದ ಆನೆಯೂ ಸೇರಿದಂತೆ ಮೂರು ಆನೆಗಳಿಗೆ ಕಬ್ಬು ತಿನ್ನಿಸಿದರು. ಹುಲಿ ದರ್ಶನ:
ಪಕ್ಕದಲ್ಲೇ ಇರುವ ಹುಲಿ ರಕ್ಷಿತಾರಣ್ಯಕ್ಕೂ ಭೇಟಿ ನೀಡಿದ ಪ್ರಧಾನಿ, ಜೀಪ್ ಸಫಾರಿ ಮಾಡಿ ಕಾಡೆಮ್ಮೆ, ಘೇಂಡಾಮೃಗ, ಪಕ್ಷಿಗಳೂ ಸೇರಿದಂತೆ ಹಲವು ವನ್ಯಜೀವಿಗಳನ್ನು ಕಣ್ತುಂಬಿಕೊಂಡರು. ಈ ವೇಳೆ ಅವರ ಜೀಪ್ ಹಿಂದೆಯೇ ಹುಲಿ ಸಂಚರಿಸಿದ್ದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಅರಣ್ಬ್ಸಿಸಿಬ್ಬಂದಿ ಜತೆ ಸಂವಾದ: ಇದೇ ವೇಳೆ ಪ್ರಧಾನಿ ಮೋದಿ ಆನೆಯ ಮಾವುತರು, ವನ ದುರ್ಗೆಯರೆಂದು ಕರೆಯಲಅಗುವ ಮಹಿಳಾ ಅರಣ್ಯ ಸಿಬ್ಬಂದಿ ಮತ್ತು ಇತರ ಅರಣ್ಯ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು.