ಮೋದಿ ಆಸ್ತಿ ₹3 ಕೋಟಿ

| Published : May 15 2024, 01:32 AM IST

ಸಾರಾಂಶ

ಲೋಕಸಭೆ ಚುನಾವಣೆಗೆ 3ನೇ ಬಾರಿ ಸ್ಪರ್ಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ ವೇಳೆ 3.02 ಕೋಟಿ ರು. ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ.

ವಾರಾಣಸಿ: ಲೋಕಸಭೆ ಚುನಾವಣೆಗೆ 3ನೇ ಬಾರಿ ಸ್ಪರ್ಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ ವೇಳೆ 3.02 ಕೋಟಿ ರು. ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ.2019ರ ಲೋಕಸಭೆ ಚುನಾವಣೆಯಲ್ಲಿ ಅವರು 2.51 ಕೋಟಿ ರು. ಆಸ್ತಿ ಪ್ರಕಟಿಸಿದ್ದರು. ಹೀಗಾಗಿ 5 ವರ್ಷದಲ್ಲಿ ಅವರ ಆಸ್ತಿ ಮೌಲ್ಯ 51 ಲಕ್ಷ ರು. ಏರಿದಂತಾಗಿದೆ.ಚುನಾವಣಾ ಅಫಿಡವಿಟ್ ಪ್ರಕಾರ, ಪ್ರಧಾನಿ ಅವರ ಬಳಿ 52,920 ರು. ನಗದು ಮತ್ತು 2,85,60,338 ರು. ಮೌಲ್ಯದ ಸ್ಥಿರ ಠೇವಣಿಗಳು ಇವೆ. ಇದರ ಹೊರತಾಗಿ ಮೋದಿ ಅವರು ಯಾವುದೇ ಸ್ಥಿರ ಆಸ್ತಿಯನ್ನು ಘೋಷಿಸಿಲ್ಲ. ಆದರೆ ಚರ ಆಸ್ತಿಗಳ ಒಟ್ಟು ಮೌಲ್ಯ 3,02,06,889 ರು. ಆಗಿದೆ. ಅವರ ಬಳಿ ಯಾವುದೇ ಕಾರು, ಮನೆ ಹಾಗೂ ಭೂಮಿ ಇಲ್ಲ.2018-19ರ ಆರ್ಥಿಕ ವರ್ಷದಲ್ಲಿ 11 ಲಕ್ಷ ರು. ಇದ್ದ ತೆರಿಗೆ ಆದಾಯವು 2022-23 ರಲ್ಲಿ 23.5 ಲಕ್ಷ ರು.ಗಳಿಗೆ ದ್ವಿಗುಣಗೊಂಡಿದೆ. ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2 ಖಾತೆಗಳನ್ನು ಹೊಂದಿದ್ದಾರೆ.ಎಸ್‌ಬಿಐನ ಗಾಂಧಿನಗರ ಶಾಖೆಯಲ್ಲಿ 73,304 ರು.ಗಳನ್ನು ಠೇವಣಿ ಇರಿಸಿದ್ದರೆ, ಎಸ್‌ಬಿಐನ ವಾರಾಣಸಿ ಶಾಖೆಯಲ್ಲಿ ಕೇವಲ 7,000 ರು. ಹೊಂದಿದ್ದಾರೆ. ಇನ್ನು ಎಸ್‌ಬಿಐನಲ್ಲಿ 2,85,60,338 ರು. ಮೌಲ್ಯದ ಸ್ಥಿರ ಠೇವಣಿಯನ್ನೂ ಹೊಂದಿದ್ದಾರೆ. ಮೋದಿ ಬಳಿ 2,67,750 ರು. ಮೌಲ್ಯದ 4 ಚಿನ್ನದ ಉಂಗುರಗಳಿವೆ.