ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ 19,650 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾದ ನವಿ ಮುಂಬೈ ಏರ್‌ಪೋರ್ಟ್ ಮೊದಲನೇ ಹಂತವನ್ನು ಲೋಕಾರ್ಪಣೆ ಮಾಡಿದ್ದಾರೆ. ಮುಂಬೈ ನಗರದ ಪಾಲಿಗೆ ಎರಡನೆಯ ಹಾಗೂ ಭಾರತದ ಅತಿದೊಡ್ಡ ಗ್ರೀನ್ ಫೀಲ್ಡ್ ಏರ್ಪೋರ್ಟ್ ಆಗಿದೆ. ಅಲ್ಲದೆ, ದೇಶದ ಮೊದಲ ಸಂಪೂರ್ಣ ಡಿಜಿಟಲೀಕೃತ ವಿಮಾನ ನಿಲ್ದಾಣವಾಗಿದೆ. ಈ ರೀತಿ 2 ಗರಿಗಳನ್ನು ಇದು ಹೊತ್ತುಕೊಂಡಿದೆ.
- ದೇಶದ ಮೊದಲ ಸಂಪೂರ್ಣ ಡಿಜಿಟಲ್ ಏರ್ ಪೋರ್ಟ್
- ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ಏರ್ಪೋರ್ಟ್- ಏರ್‌ಪೋರ್ಟ್ 1ನೇ ಹಂತಕ್ಕೆ ಮೋದಿ ಚಾಲನೆ
- ಇದು ಮುಂಬೈನ 2ನೇ ಇಂಟರ್‌ನ್ಯಾಷನಲ್ ಏರ್ಪೋರ್ಟ್‌ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ 19,650 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾದ ನವಿ ಮುಂಬೈ ಏರ್‌ಪೋರ್ಟ್ ಮೊದಲನೇ ಹಂತವನ್ನು ಲೋಕಾರ್ಪಣೆ ಮಾಡಿದ್ದಾರೆ. ಮುಂಬೈ ನಗರದ ಪಾಲಿಗೆ ಎರಡನೆಯ ಹಾಗೂ ಭಾರತದ ಅತಿದೊಡ್ಡ ಗ್ರೀನ್ ಫೀಲ್ಡ್ ಏರ್ಪೋರ್ಟ್ ಆಗಿದೆ. ಅಲ್ಲದೆ, ದೇಶದ ಮೊದಲ ಸಂಪೂರ್ಣ ಡಿಜಿಟಲೀಕೃತ ವಿಮಾನ ನಿಲ್ದಾಣವಾಗಿದೆ. ಈ ರೀತಿ 2 ಗರಿಗಳನ್ನು ಇದು ಹೊತ್ತುಕೊಂಡಿದೆ.ಈ ಹೊಸ ವಿಮಾನ ನಿಲ್ದಾಣವು 1,160 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದ್ದು, ಖಾಸಗಿ ಮತ್ತು ಸರ್ಕಾರಿ(ಪಿಪಿಪಿ) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮುಂಬೈ ಮೆಟ್ರೋಪಾಲಿಟನ್ ನಗರದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಈ ಮೂಲಕ ಮುಂಬೈನಲ್ಲಿ ಹಾಲಿ ಇರುವ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒತ್ತಡ ಕಡಿಮೆ ಆಗಲಿದೆ.
ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಮೋದಿ ಅವರು ವಿಮಾನ ನಿಲ್ದಾಣದಲ್ಲಿ ಓಡಾಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ನಂತರ ಮಾತನಾಡಿದ ಅವರು, ಈ ಹೊಸ ವಿಮಾನ ನಿಲ್ದಾಣ ಮೂಲಕ ಮಹಾರಾಷ್ಟ್ರದ ರೈತರು ಮಧ್ಯಪ್ರಾಚ್ಯ, ಯುರೋಪ್ ದೇಶಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡುವುದು ಸುಲಭವಾಗಲಿದೆ. ಈ ವಿಮಾನ ನಿಲ್ದಾಣವು ಹೊಸ ಉದ್ಯಮಗಳನ್ನೂ ಆಕರ್ಷಿಸಲಿದೆ ಎಂದರು.
ಇದೇ ವೇಳೆ 2014ರಲ್ಲಿ ದೇಶದಲ್ಲಿ 74 ಏರ್ಪೋರ್ಟ್‌ಗಳಿದ್ದವು. ಆದರೆ ಇದೀಗ ಅವುಗಳ ಸಂಖ್ಯೆ 160 ದಾಟಿದೆ ಎಂದ ಅವರು, ಈ ದಶಕದ ಅಂತ್ಯದಲ್ಲಿ ಭಾರತವನ್ನು ಅಂತಾರಾಷ್ಟ್ರೀಯ ವೈಮಾನಿಕ ನಿರ್ವಹಣೆ, ರಿಪೇರಿ ಮತ್ತು ನವೀಕರಣ ಕ್ಷೇತ್ರದಲ್ಲಿ ಪ್ರಮುಖ ಕೇಂದ್ರವನ್ನಾಗಿ ಮಾಡುವ ಗುರಿ ಕೇಂದ್ರ ಸರ್ಕಾರಕ್ಕಿದೆ ಎಂದರು.