ಚುನಾವಣಾ ಆಯುಕ್ತರ ನೇಮಕಕ್ಕೆ ಇಂದು ಮೋದಿ ಸಮಿತಿ ಸಭೆ

| Published : Mar 14 2024, 02:04 AM IST

ಸಾರಾಂಶ

ಎರಡೂ ಚುನಾವಣಾ ಆಯುಕ್ತರ ಖಾಲಿ ಹುದ್ದೆ ಭರ್ತಿ ಮಾಡುವ ಸಾಧ್ಯತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿಗಿದೆ.

ನವದೆಹಲಿ: ಒಬ್ಬರ ರಾಜೀನಾಮೆ ಹಾಗೂ ಇನ್ನೊಬ್ಬರ ಸೇವಾ ನಿವೃತ್ತಿಯಿಂದ ತೆರವಾಗಿರುವ 2 ಚುನಾವಣಾ ಆಯುಕ್ತರ ಹುದ್ದೆಗಳ ಭರ್ತಿಗಾಗಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಚುನಾವಣಾ ಆಯುಕ್ತರ ನೇಮಕ ಸಮಿತಿ ಸಭೆ ನಡೆಸಲಿದೆ.

ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ನಿವಾಸದಲ್ಲಿ ಸಭೆ ಆಯೋಜನೆ ಆಗಿದೆ. ಇದರಲ್ಲಿ ಒಬ್ಬ ಕೇಂದ್ರ ಸಚಿವರು ಹಾಗೂ ಲೋಕಸಭೆಯ ವಿಪಕ್ಷ ನಾಯಕ ಸದಸ್ಯರಾಗಿದ್ದಾರೆ.ಈ ನಡುವೆ ಆಯುಕ್ತರ ಹುದ್ದೆಗೆ 6-7 ಹೆಸರು ಶಾರ್ಟ್‌ ಲಿಸ್ಟ್‌ ಆಗಿವೆ ಎನ್ನಲಾಗಿದೆ. ಹೀಗಾಗಿ ಸಮಿತಿ ಸದಸ್ಯರಾದ ಲೋಕಸಭೆ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಕೇಂದ್ರ ಕಾನೂನು ಸಚಿವಾಲಯಕ್ಕೆ ಈ ಹೆಸರುಗಳನ್ನು ತಮಗೆ ನೀಡಬೇಕು ಎಂದು ಕೋರಿದ್ದಾರೆ.ಚುನಾವಣಾ ಆಯೋಗ 3 ಸದಸ್ಯರ ಸಂಸ್ಥೆ ಆಗಿದ್ದು, ಮುಖ್ಯ ಚುನಾವಣಾ ಆಯುಕ್ತರ ಜತೆಗೆ ಇಬ್ಬರು ಆಯುಕ್ತರು ಇರುತ್ತಾರೆ. ಈ ಪೈಕಿ ಆಯುಕ್ತರಾದ ಅರುಣ್‌ ಗೋಯಲ್‌ ಇತ್ತೀಚೆಗೆ ರಾಜೀನಾಮೆ ನೀಡಿದ್ದರೆ, ಅನೂಪ್‌ ಚಂದ್ರ ನಿವೃತ್ತಿ ಆಗಿದ್ದರು. ಹೀಗಾಗಿ ಮುಖ್ಯ ಆಯುಕ್ತ ರಾಜೀವ್ ಕುಮಾರ್‌ ಮಾತ್ರ ಆಯೋಗದಲ್ಲಿ ಉಳಿದುಕೊಂಡಿದ್ದಾರೆ.