ಖ್ಯಾತ ನಟ ರಾಜ್‌ ಕಪೂರ್‌ ಜನ್ಮ ಶತಮಾನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ

| Published : Dec 12 2024, 12:33 AM IST / Updated: Dec 12 2024, 04:46 AM IST

ಸಾರಾಂಶ

 ಖ್ಯಾತ ನಟ ರಾಜ್‌ ಕಪೂರ್‌ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ಡಿ.13ರಿಂದ ಮುಂಬೈನಲ್ಲಿ ಆರಂಭವಾಗುವ ರಾಜ್‌ ಕಪೂರ್‌ ಚಿತ್ರೋತ್ಸವಕ್ಕೆ ಕಪೂರ್‌ ಕುಟುಂಬದವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದರು.

ನವದೆಹಲಿ: ಖ್ಯಾತ ನಟ ರಾಜ್‌ ಕಪೂರ್‌ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ಡಿ.13ರಿಂದ ಮುಂಬೈನಲ್ಲಿ ಆರಂಭವಾಗುವ ರಾಜ್‌ ಕಪೂರ್‌ ಚಿತ್ರೋತ್ಸವಕ್ಕೆ ಕಪೂರ್‌ ಕುಟುಂಬದವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದರು. ಈ ವೇಳೆ ಕರೀನಾ ಕಪೂರ್, ಕರಿಷ್ಮಾ ಕಪೂರ್, ರಣಬೀರ್‌ ಕಪೂರ್‌, ಆಲಿಯಾ ಭಟ್‌, ಸೈಫ್‌ ಅಲಿ ಖಾನ್‌ ಮೊದಲಾದವರಿದ್ದರು.

ಸಂಘರ್ಷಪೀಡಿತ ಸಿರಿಯಾದಿಂದ 75 ಭಾರತೀಯರ ಸ್ಥಳಾಂತರ

ನವದೆಹಲಿ: ಸಿರಿಯಾದಲ್ಲಿ ಬಷರ್‌ ಅಲ್‌ ಅಸಾದ್‌ ಸರ್ಕಾರ ಪತನವಾಗಿ ದೇಶ ಬಂಡುಕೋರರ ವಶವಾದ ಹಿನ್ನೆಲೆಯಲ್ಲಿ ಅಲ್ಲಿದ್ದ 75 ಭಾರತೀಯರನ್ನು ಸ್ಥಳಾಂತರಿಸಲಾಗಿದೆ.ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಭಾರತದ ವಿದೇಶಾಂಗ ಇಲಾಖೆ, ‘ಸಿರಿಯಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಡಮಾಸ್ಕಸ್‌ ಹಾಗೂ ಬೈರೂತ್‌ನಲ್ಲಿರುವ ದೂತಾವಾಸಗಳ ಸಹಕಾರದಿಂದ 75 ಭಾರತೀಯರನ್ನು ಅಲ್ಲಿಂದ ಲೆಬನಾನ್‌ಗೆ ಕರೆತರಲಾಗಿದೆ. ಇದರಲ್ಲಿ ಜಮ್ಮು ಕಾಶ್ಮೀರದ 44 ವ್ಯಕ್ತಿಗಳೂ ಸೇರಿದ್ದಾರೆ. ಇವರೆಲ್ಲಾ ಲೆಬನಾನ್‌ನಿಂದ ವಾಣಿಜ್ಯ ವಿಮಾನಗಳಲ್ಲಿ ಭಾರತಕ್ಕೆ ಬರಲಿದ್ದಾರೆ’ ಎಂದು ಮಾಹಿತಿ ನೀಡಿದೆ.

ಅಂತೆಯೇ, ಸಿರಿಯಾದಲ್ಲಿರುವ ಭಾರತೀಯರಿಗೆ ಡಮಾಸ್ಕಸ್‌ನ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.