ಸಾರಾಂಶ
ಪ್ರಧಾನಮಂತ್ರಿ ನರೇಂದ್ರ ಮೋದಿ ಮನ್ ಕೀ ಬಾತ್‌ನಲ್ಲಿ ಭಾರತದ ಮೊದಲ ಫೀಲ್ಡ್ ಮಾರ್ಷಲ್ ಕನ್ನಡಿಗ ಕೆ. ಎಂ ಕಾರ್ಯಪ್ಪ ಅವರನ್ನು ಜನ್ಮದಿನಾಚರಣೆಯ ಅಂಗವಾಗಿ ಸ್ಮರಿಸಿದರು.
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 109ನೇ ಮನ್ ಕೀ ಬಾತ್‌ನಲ್ಲಿ ಭಾರತೀಯ ಸೇನೆಯ ಮೊದಲ ದಂಡನಾಯಕ, ಕನ್ನಡಿಗ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರನ್ನು ಸ್ಮರಿಸಿದರು.
ಈ ದಿನ ಭಾರತದ ಇಬ್ಬರು ಮಹನೀಯರು ಜನಿಸಿದ ದಿನವಾಗಿದೆ.ಒಬ್ಬರು ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಆದರೆ ಇನ್ನೊಬ್ಬರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ.
ಕಾರ್ಯಪ್ಪನವರು ಭಾರತದ ಇತಿಹಾಸದ ಮಹತ್ವದ ಸಮಯದಲ್ಲಿ ಸೇನೆಯನ್ನು ಮುನ್ನಡೆಸಿದ್ದರು.ಭಾರತೀಯ ಸೇನೆ ಸದೃಢವಾಗಲು ಕಾರ್ಯಪ್ಪ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು’ ಎಂದು ಹಾಡಿ ಹೊಗಳಿದರು.