ತಾಯಿಯ ನೆನೆದು ಮೋದಿ ಕಣ್ಣೀರು!

| Published : May 15 2024, 01:41 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಸಂದರ್ಶನದ ವೇಳೆ ತಮ್ಮ ತಾಯಿಯನ್ನು ನೆನೆದು ಕಣ್ಣೀರು ಹಾಕಿದ ಭಾವುಕ ಪ್ರಸಂಗ ನಡೆದಿದೆ.

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಸಿ ಟೀವಿ ಚಾನೆಲ್‌ ಒಂದಕ್ಕೆ ಸಂದರ್ಶನ ನೀಡುವಾಗ ತಾಯಿಯ ನೆನೆದು ಭಾವುಕರಾಗಿ ಕಣ್ಣೀರು ಹಾಕಿದರು.

ಗುಜರಾತ್‌ನ ಗಾಂಧಿನಗರದಲ್ಲಿ 2022 ರಲ್ಲಿ ನಿಧನರಾದ ತಮ್ಮ ತಾಯಿ ಹೀರಾಬೆನ್ ಮೋದಿ ಅವರ ಸಲಹೆಯನ್ನು ನೆನಪಿಸಿಕೊಂಡ ಮೋದಿ, ‘ನನ್ನ ತಾಯಿಗೆ 100 ವರ್ಷ ತುಂಬಿದಾಗ ಮತ್ತು ಅವರ ಜನ್ಮದಿನದಂದು ನಾನು ಅವರನ್ನು ಭೇಟಿಯಾಗಲು ಹೋಗಿದ್ದೆ. ಆಗ ಅವರು 2 ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಹೇಳಿದರು. ಮೊದಲನೆಯದು ಲಂಚ ತೆಗೆದುಕೊಳ್ಳಬೇಡಿ ಮತ್ತು ಬಡವರನ್ನು ಮರೆಯಬೇಡಿ ಎಂದು. ಎರಡನೆಯದು ಬುದ್ಧಿವಂತಿಕೆಯಿಂದ ಕೆಲಸ ಮಾಡಿ, ಪರಿಶುದ್ಧ ಜೀವನ ನಡೆಸಿ ಎಂದು’ ಎಂಬುದಾಗಿ ನುಡಿಯುತ್ತ ಕಣ್ಣೀರು ಹಾಕಿದರು.