ಸಾರಾಂಶ
ಸ್ವಜನಪಕ್ಷಪಾತದ ವಿಷವರ್ತುಲದಲ್ಲಿ ಕಾಂಗ್ರೆಸ್ ಸಿಲುಕಿದ್ದು, ಗಾಂಧಿ ಕುಟುಂಬನ್ನು ಬಿಟ್ಟು ಎಲ್ಲರೂ ಕಾಂಗ್ರೆಸ್ ತೊರೆಯುತ್ತಿದ್ದಾರೆ ಎಂದು ವಿಕಸಿತ ಭಾರತ, ವಿಕಸಿತ ರಾಜಸ್ಥಾನ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ.
ಜೈಪುರ: ‘ಕಾಂಗ್ರೆಸ್ ಸ್ವಜನಪಕ್ಷಪಾತವೆಂಬ ವಿಷವರ್ತುಲದೊಳಗೆ ಸಿಲುಕಿರುವ ಬಹುತೇಕರು ಕಾಂಗ್ರೆಸ್ ಪಕ್ಷವನ್ನು ಒಬ್ಬೊಬ್ಬರಾಗಿ ಬಿಡುತ್ತಿದ್ದಾರೆ.
ಕೊನೆಗೆ ಒಂದು ಕುಟುಂಬ ಮಾತ್ರ ಆ ಪಕ್ಷದೊಳಗೆ ಕಾಣುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.
ವಿಕಸಿತ ಭಾರತ ವಿಕಸಿತ ರಾಜಸ್ಥಾನ ಸನಾವೇಶದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ಗೆ ಏಕಮಾತ್ರ ಉದ್ದೇಶವಿದೆ. ಅದೆಂದರೆ ಪ್ರಧಾನಿ ಮೋದಿಯನ್ನು ವಿರೋಧಿಸುವುದು.
ಈ ಗುರಿಯನ್ನು ಸಾಧಿಸಲು ತಾನು ಸ್ವಜನಪಕ್ಷಪಾತವೆಂಬ ವಿಷವರ್ತುಲದೊಳಗೆ ಸಿಲುಕಿ ದೇಶವನ್ನು ಕಾಂಗ್ರೆಸ್ ಪಕ್ಷ ವಿಭಜಿಸಿದೆ. ಆ ಪಕ್ಷಕ್ಕೆ ಕುಟುಂಬ ರಾಜಕಾರಣ ಬಿಟ್ಟು ಬೇರೇನೂ ಗೊತ್ತಿಲ್ಲ.
ಹಾಗಾಗಿ ಇಂದು ಎಲ್ಲರೂ ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿದ್ದು, ಕೇವಲ ಒಂದು ಕುಟುಂಬವನ್ನು ಮಾತ್ರ ಆ ಪಕ್ಷದಲ್ಲಿ ಕಾಣಬಹುದಾಗಿದೆ’ ಎಂದು ಟೀಕಿಸಿದರು.