ಇರಾನ್ ಅಧ್ಯಕ್ಷ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

| Published : May 21 2024, 01:58 AM IST / Updated: May 21 2024, 05:18 AM IST

ಇರಾನ್ ಅಧ್ಯಕ್ಷ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ
Share this Article
  • FB
  • TW
  • Linkdin
  • Email

ಸಾರಾಂಶ

ಇರಾನ್ ಅಧ್ಯಕ್ಷ ಸಾವಿಗೆ ಮೋದಿ ಆಘಾತ ವ್ಯಕ್ತಪಡಿಸಿದ್ದು, ಇರಾನ್‌ ಜೊತೆಗೆ ಭಾರತ ನಿಲ್ಲಲಿದೆ ಎಂದು ಪ್ರಧಾನಿ ಅಭಯಹಸ್ತ ನೀಡಿದ್ದಾರೆ.

ನವದೆಹಲಿ: ಇರಾನ್‌ ಅಧ್ಯಕ್ಷ ಸೈಯ್ಯದ್‌ ಇಬ್ರಾಹಿಂ ರೈಸಿ ಮತ್ತು ಅಲ್ಲಿನ ವಿದೇಶಾಂಗ ಮಂತ್ರಿ ಅವರು ಹೆಲಿಕಾಪ್ಟರ್‌ ದುರಂತದಲ್ಲಿ ಸಾವನ್ನಪ್ಪಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿ, ‘ಅಧ್ಯಕ್ಷರನ್ನು ಕಳೆದುಕೊಂಡಿರುವ ದುಃಖದ ಸಮಯದಲ್ಲಿ ಇರಾನ್‌ ಜೊತೆಗೆ ಭಾರತ ನಿಲ್ಲಲಿದೆ.

ಇಬ್ರಾಹಿಂ ರೈಸಿ ಭಾರತ-ಇರಾನ್‌ ದ್ವಿಪಕ್ಷೀಯ ಸಂಬಂಧ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅವರ ಸಾವಿಗೆ ಸಂತಾಪ ಸೂಚಿಸುತ್ತಾ ರೈಸಿ ಕುಟುಂಬಕ್ಕೆ ಮತ್ತು ಇರಾನ್‌ ಜನತೆಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ’ ಎಂದು ಪ್ರಾರ್ಥಿಸಿದ್ದಾರೆ.