ಇಂದು ಪೋಖ್ರಣ್‌ನಲ್ಲಿ ‘ಭಾರತ್‌ ಶಕ್ತಿ’ ವಾರ್‌ ಗೇಮ್‌

| Published : Mar 12 2024, 02:07 AM IST

ಸಾರಾಂಶ

ರಾಜಸ್ಥಾನದ ಪೋಖ್ರಣ್‌ನಲ್ಲಿ ಮಂಗಳವಾರ ‘ಭಾರತ್‌ ಶಕ್ತಿ’ ವಾರ್‌ ಗೇಮ್‌ ಹೆಸರಿನಲ್ಲಿ ಸೇನಾ ಶಕ್ತಿಯ ಅನಾವರಣ ಮಾಡಲಾಗುತ್ತದೆ. ಈ ವಾರ್‌ಗೇಮ್‌ನಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರ ಪ್ರದರ್ಶನ ಮತ್ತು ಯುದ್ಧವಿಮಾನಗಳ ಹಾರಾಟ ನಡೆಸಲಾಗುತ್ತದೆ.

ನವದೆಹಲಿ: ರಾಜಸ್ಥಾನದ ಪೋಖ್ರಣ್‌ನಲ್ಲಿ ಮಂಗಳವಾರ ‘ಭಾರತ್‌ ಶಕ್ತಿ’ ವಾರ್‌ ಗೇಮ್‌ ಹೆಸರಿನಲ್ಲಿ ಸೇನಾ ಶಕ್ತಿಯ ಅನಾವರಣ ಮಾಡಲಾಗುತ್ತದೆ. ಈ ವಾರ್‌ಗೇಮ್‌ನಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರ ಪ್ರದರ್ಶನ ಮತ್ತು ಯುದ್ಧವಿಮಾನಗಳ ಹಾರಾಟ ನಡೆಸಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಇದರಲ್ಲಿ ಭಾಗಿಯಾಗಲಿದ್ದಾರೆ. ಇದು ಮೋದಿಯವರ ‘ಆತ್ಮನಿರ್ಭರ್ ಭಾರತ’ ಪರಿಕಲ್ಪನೆಯನ್ನು ಆಧರಿಸಿದೆ ಮತ್ತು ಭಾರತದ ಸೇನಾ ಶಕ್ತಿಯನ್ನು ಪ್ರದರ್ಶಿಸುತ್ತದೆ. ಮೂರೂ ಸೇನಾಪಡೆಗಳ ಮುಖ್ಯಸ್ಥ ಜ। ಅನಿಲ್ ಚೌಹಾಣ್ ಸೇರಿದಂತೆ ತ್ರಿ-ಸೇವೆಗಳ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಏನೇನು ಪ್ರದರ್ಶನ?:ಧನುಷ್‌ ಮತ್ತು ಸಾರಂಗ್‌ ಬಂದೂಕುಗಳು, ಆಕಾಶ್‌ ಯುದ್ಧ ತಂತ್ರಜ್ಞಾನ, ತೇಜಸ್ ಯುದ್ಧ ವಿಮಾನ, ಕೆ-9 ಫಿರಂಗಿ ಬಂದೂಕುಗಳು, ಸ್ವದೇಶಿ ಡ್ರೋನ್‌ಗಳು, ಪಿನಾಕಾ ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್‌ಗಳು ಮತ್ತು ಅಲ್ಪ-ಶ್ರೇಣಿಯ ಕ್ಷಿಪಣಿಗಳ ಪ್ರದರ್ಶನ ನಡೆಯಲಿದೆ. ಕೆಲವು ಸಮರನೌಕೆಗಳನ್ನು ಕೂಡ ಪ್ರಾತ್ಯಕ್ಷಿಕೆಯಲ್ಲಿ ಪ್ರದರ್ಶಿಸಲಾಗುತ್ತದೆ ಹಾಗೂ ತೇಜಸ್‌, ಸ್ವದೇಶಿ ಡ್ರೋನ್‌ಗಳ ಹಾರಾಟ ನಡೆಯಲಿದೆ.

ಫೆಬ್ರವರಿಯಲ್ಲಿ, ಪ್ರಧಾನಿ ಮೋದಿ ಪೋಖ್ರಣ್‌ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಭಾರತೀಯ ವಾಯುಪಡೆಯ ಅತಿದೊಡ್ಡ ಯುದ್ಧ ಸಮಾರಾಭ್ಯಾಸವಾದ ವಾಯುಶಕ್ತಿ-2024 ನಲ್ಲಿ ಭಾಗವಹಿಸಿದ್ದರು. ರಫೇಲ್ ವಿಮಾನ ಸೇರಿದಂತೆ 140ಕ್ಕೂ ಹೆಚ್ಚು ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಸಮರಾಭ್ಯಾಸದಲ್ಲಿ ಪಾಲ್ಗೊಂಡಿದ್ದವು.