ಅಸ್ಸಾಂ ಚಹಾ ತೋಟಕ್ಕೆ ಮೋದಿ ಭೇಟಿ: ಪ್ರಶಂಸೆ

| Published : Mar 10 2024, 01:33 AM IST

ಸಾರಾಂಶ

ಜಾಗತಿಕವಾಗಿ ಪ್ರಸಿದ್ಧಿ ಗಳಿಸಿರುವ ಅಸ್ಸಾಂ ಚಹಾ ತೋಟಗಳಿಗೆ ಪ್ರವಾಸಿಗರು ಭೇಟಿ ನೀಡುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಕಾಜಿರಂಗ (ಅಸ್ಸಾಂ): ಚಾಯ್‌ ಪೆ ಚರ್ಚಾ ಎನ್ನುವ ಪ್ರಚಾರ ತಂತ್ರದ ಮೂಲಕ ಪ್ರಧಾನಿ ಹುದ್ದೆಗೇರಿದ್ದ ನರೇಂದ್ರ ಮೋದಿ ಅಸ್ಸಾಂನಲ್ಲಿರುವ ಹಥಿಕುಳಿ ಚಹಾ ಉದ್ಯಾನಕ್ಕೆ ಭೇಟಿ ನೀಡಿ ತುಸುಹೊತ್ತು ವಿಹಾರ ನಡೆಸಿದರು.ಈ ಕುರಿತು ಟ್ವೀಟ್‌ ಮಾಡಿ, ‘ಅಸ್ಸಾಂನಲ್ಲಿ ಚಹಾ ಉದ್ಯಾನವೊಂದಕ್ಕೆ ಭೇಟಿ ನೀಡಿದೆ. ಅಲ್ಲಿನ ಚಹಾ ಪುಡಿಗಳು ಇಂದು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿವೆ. ಈ ರೀತಿ ಗುಣಮಟ್ಟದ ಚಹಾಪುಡಿ ತಯಾರಿಕೆಗೆ ಶ್ರಮಿಸುತ್ತಿರುವ ಶ್ರಮಿಕ ವರ್ಗಕ್ಕೆ ಅಭಿನಂದಿಸುತ್ತಾ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿನ ಚಹಾ ಉದ್ಯಾನಗಳಿಗೆ ಭೇಟಿ ನೀಡಬೇಕೆಂದು ಕೋರುತ್ತೇನೆ’ ಎಂದು ಕರೆ ನೀಡಿದ್ದಾರೆ. ಪ್ರಧಾನಿ ಮೋದಿಯವರು ತಮ್ಮ ಯೌವನಾವಸ್ಥೆಯಲ್ಲಿ ಗುಜರಾತ್‌ನ ವಡ್‌ನಗರದ ರೈಲು ನಿಲ್ದಾಣದಲ್ಲಿ ಚಹಾ ಮಾರಿದ್ದರು ಎಂಬುದು ಗಮನಾರ್ಹ ಅಂಶವಾಗಿದೆ.