ಲಾವೋಸ್‌ನಲ್ಲಿ ರಾಮಾಯಣ ಪ್ರದರ್ಶನ ವೀಕ್ಷಿಸಿದ ಮೋದಿ

| Published : Oct 11 2024, 11:58 PM IST

ಸಾರಾಂಶ

ಲಾವೋಸ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ಲಾವೋಸ್‌ ಪರಂಪರೆ ಮತ್ತು ಪ್ರಾಚೀನ ನಾಗರಿಕತೆಯನ್ನು ಬಿಂಬಿಸುವ ‘ಲವೋಷಿಯನ್ ರಾಮಾಯಣ’ ಪ್ರದರ್ಶನವನ್ನು ವೀಕ್ಷಿಸಿದರು.

ವಿಯೆಂಟಿಯಾನ್‌: ಲಾವೋಸ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ಲಾವೋಸ್‌ ಪರಂಪರೆ ಮತ್ತು ಪ್ರಾಚೀನ ನಾಗರಿಕತೆಯನ್ನು ಬಿಂಬಿಸುವ ‘ಲವೋಷಿಯನ್ ರಾಮಾಯಣ’ ಪ್ರದರ್ಶನವನ್ನು ವೀಕ್ಷಿಸಿದರು.

ಲಾವೋಸ್‌ನಲ್ಲಿ ಪ್ರದರ್ಶನಗೊಂಡ ಈ ರಾಮಾಯಣವು 16 ಶತಮಾನದಲ್ಲಿ ಭಾರತದಿಂದ ಲಾವೋಸ್‌ಗೆ ಹೋಗಿ ನೆಲೆಸಿದ್ದ ಬೌದ್ಧ ಸನ್ಯಾಸಿಗಳು ರಚಿಸಿಕೊಂಡ ರಾಮಾಯಣ. ಇದು ಮೂಲ ರಾಮಾಯಣವನ್ನೇ ಹೋಲಲಿದ್ದು, ಅಲ್ಲಿನ ಪ್ರಾದೇಶಿಕತೆಗೆ ಅನುಗುಣವಾಗಿ ಕೊಂಚ ಮಾರ್ಪಾಡು ಮಾಡಿಕೊಂಡಿದ್ದಾರೆ. ಆಸಿಯಾನ್-ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಲಾವೋಸ್ ಆಗಮಿಸಿದ್ದು, ಅಲ್ಲಿ ಲುವಾಂಗ್ ಪ್ರಬಾಂಗ್‌ನ ಥಿಯೇಟರ್‌ನಲ್ಲಿ ಫಲಕ್ ಫಲಮ್ ಅಥವಾ ಫ್ರಾ ಲಕ್ ಫ್ರಾ ರಾಮ್ ಎಂಬ ಲೊವೇಷಿಯನ್ ರಾಮಾಯಣದ ಸಂಚಿಕೆಯನ್ನು ವೀಕ್ಷಿಸಿದರು.