ಇಟಲಿ ಪ್ರಧಾನಿ ಮೆಲೋನಿಆತ್ಮಕಥೆಗೆ ಪ್ರಧಾನಿ ಮೋದಿಮುನ್ನುಡಿ, ನಾರಿ ಶಕ್ತಿ ಉಲ್ಲೇಖ

| Published : Sep 30 2025, 01:00 AM IST

ಇಟಲಿ ಪ್ರಧಾನಿ ಮೆಲೋನಿಆತ್ಮಕಥೆಗೆ ಪ್ರಧಾನಿ ಮೋದಿಮುನ್ನುಡಿ, ನಾರಿ ಶಕ್ತಿ ಉಲ್ಲೇಖ
Share this Article
  • FB
  • TW
  • Linkdin
  • Email

ಸಾರಾಂಶ

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆತ್ಮಕಥೆಯ ಭಾರತದ ಆವೃತ್ತಿಗೆ ಪ್ರಧಾನಿ ನರೇಂದ್ರ ಮೋದಿ ಮುನ್ನುಡಿ ಬರೆದಿದ್ದಾರೆ. ಅದರಲ್ಲಿ ಮೆಲೋನಿ ಜೀವನವನ್ನು ನಾರಿ ಶಕ್ತಿಗೆ ಹೋಲಿಸಿದ್ದಾರೆ.

ನವದೆಹಲಿ: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆತ್ಮಕಥೆಯ ಭಾರತದ ಆವೃತ್ತಿಗೆ ಪ್ರಧಾನಿ ನರೇಂದ್ರ ಮೋದಿ ಮುನ್ನುಡಿ ಬರೆದಿದ್ದಾರೆ. ಅದರಲ್ಲಿ ಮೆಲೋನಿ ಜೀವನವನ್ನು ನಾರಿ ಶಕ್ತಿಗೆ ಹೋಲಿಸಿದ್ದಾರೆ.

‘ಮೆಲೋನಿ ಅವರ ಜೀವನ ಕೇವಲ ರಾಜಕೀಯ, ಅಧಿಕಾರಕ್ಕಲ್ಲ. ಇಟಲಿ ಜನರ ಸೇವೆಗೆ ಧೈರ್ಯ, ನಂಬಿಕೆ, ದೃಢನಿಶ್ಚಯದಿಂದ ಕೂಡಿದೆ. ಜೀವನದಲ್ಲಿ ಮೆಲೋನಿ ಸಾಧಿಸಿದ ಹಲವು ಸಂಗತಿಗಳು ಈ ಪುಸ್ತಕವನ್ನು ಮತ್ತಷ್ಟು ವಿಶೇಷವಾಗಿಸಿದೆ. ಅವರ ಜೀವನ, ನಾರಿ ಶಕ್ತಿ ಪರಿಕಲ್ಪನೆಗೆ ಬಲವಾದ ನಂಟಿದೆ’ ಎಂದು ಪ್ರಧಾನಿ ಮೋದಿ ಮುನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ.

‘ಐ ಆಮ್ ಜಾರ್ಜಿಯಾ: ಮೈ ರೂಟ್ಸ್, ಮೈ ಪ್ರಿನ್ಸಿಪಲ್ಸ್’ ಎಂಬ ಮೆಲೋನಿ ಆತ್ಮಕಥೆ ರೂಪಾ ಪಬ್ಲಿಕೇಷನ್ಸ್‌ನಿಂದ ಭಾರತದಲ್ಲಿ ಬಿಡುಗಡೆಯಾಗಲಿದೆ.