ಹಮಾಸ್ ನೂತನ ಐಸಿಸ್: ನೆತನ್ಯಾಹು
KannadaprabhaNewsNetwork | Published : Oct 11 2023, 12:45 AM IST
ಹಮಾಸ್ ನೂತನ ಐಸಿಸ್: ನೆತನ್ಯಾಹು
ಸಾರಾಂಶ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಇಸ್ರೇಲ್ ನಾಗರಿಕರನ್ನು ಬರ್ಬರವಾಗಿ ಕೊಂದು ಹಾಕಿರುವ ಹಮಾಸ್ ಉಗ್ರರನ್ನು ‘ನೂತನ ಐಸಿಸ್’ ಎಂದು ಹರಿತ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಈ ಉಗ್ರರ ವಿರುದ್ಧ ನಾಗರಿಕ ಶಕ್ತಿಗಳು ಒಂದಾಗಿ ಹೋರಾಡಿ ಸೋಲಿಸಬೇಕು ಎಂದು ಕರೆ ನೀಡಿದ್ದಾರೆ.
ಟೆಲ್ ಅವಿವ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಇಸ್ರೇಲ್ ನಾಗರಿಕರನ್ನು ಬರ್ಬರವಾಗಿ ಕೊಂದು ಹಾಕಿರುವ ಹಮಾಸ್ ಉಗ್ರರನ್ನು ‘ನೂತನ ಐಸಿಸ್’ ಎಂದು ಹರಿತ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಈ ಉಗ್ರರ ವಿರುದ್ಧ ನಾಗರಿಕ ಶಕ್ತಿಗಳು ಒಂದಾಗಿ ಹೋರಾಡಿ ಸೋಲಿಸಬೇಕು ಎಂದು ಕರೆ ನೀಡಿದ್ದಾರೆ. ಸೋಮವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಐಸಿಸ್ ಎಂದೂ ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್ ಗುಂಪು ಸಿರಿಯಾ ಮತ್ತು ಇರಾಕ್‌ನ ವಿಶಾಲ ಪ್ರದೇಶಗಳನ್ನು ನಿಯಂತ್ರಿಸಿದಾಗ ಮಾಡಿದ ದುಷ್ಕೃತ್ಯಗಳಿಗೆ ಹೋಲಿಸಿದರು. ‘ಹಮಾಸ್ ಭಯೋತ್ಪಾದಕರು ನಮ್ಮ ಮಕ್ಕಳನ್ನು ಬಂಧಿಸಿ, ಸುಟ್ಟುಹಾಕಿದ್ದಾರೆ ಮತ್ತು ಗಲ್ಲಿಗೇರಿಸಿದ್ದಾರೆ. ಅವರು ಅನಾಗರಿಕರು, ಹಮಾಸ್ ಐಸಿಸ್ ಥರದ ಸಂಘಟನೆ’ ಎಂದು ಕಿಡಿಕಾರಿದರು. ‘ಹಮಾಸ್ ಮೇಲೆ ಈಗಷ್ಟೇ ನಾವು ದಾಳಿ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಏನು ಮಾಡಲಿದ್ದೇವೋ ಅದು ಹಮಾಸ್‌ನ ಹಲವು ತಲೆಮಾರುಗಳಲ್ಲೂ ಪ್ರತಿಧ್ವನಿಸಲಿದೆ’ ಎಂದೂ ನೆತನ್ಯಾಹು ಗುಡುಗಿದರು.