ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಶ್ಮಿರ್‌ ಯುವಕ ನಜೀಮ್‌ ನಜೀರ್‌ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ಶ್ರೀನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಶ್ಮೀರದ ಯುವಕನೊಂದಿಗೆ ಸೆಲ್ಫಿ ತೆಗೆದುಕೊಂಡು ‘ಇವನು ನನ್ನ ಸ್ನೇಹಿತ’ನೆಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡು ಗಮನ ಸೆಳೆದಿದ್ದಾರೆ.

ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಶ್ರೀನಗರಕ್ಕೆ ಭೇಟಿ ನೀಡಿದ್ದ ಮೋದಿ, ಕೇಂದ್ರ ಸರ್ಕಾರಿ ಯೋಜನೆಗಳಿಂದ ಸಹಾಯ ಪಡೆದು ಜೇನು ಸಾಕಾಣಿಕೆಯಲ್ಲಿ ಯಶಸ್ವಿಯಾದ ನಜೀಮ್ ನಜೀರ್ ಎಂಬ ಯುವಕನೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ ಹಾಗೂ ಅವನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಧಾನ ಮಂತ್ರಿಯೊಂದಿಗೆ ಸಂವಾದಕ್ಕೆ ಆಯ್ಕೆಯಾದ ವಿಕಸಿತ ಭಾರತ ಯೋಜನೆಯ ಫಲಾನುಭವಿ ಯುವಕರಲ್ಲಿ ನಜೀರ್‌ ಕೂಡ ಒಬ್ಬನಾಗಿದ್ದ. ಆಗ ನಜೀರ್‌, ಮೋದಿ ಜತೆ ಸೆಲ್ಫಿ ತೆಗೆದುಕೊಳ್ಳುವ ಬಯಕೆ ವ್ಯಕ್ತಪಡಿಸಿದ. ಇದಕ್ಕೆ ಒಪ್ಪಿದ ಮೋದಿ ನಜೀರ್‌ ಜತೆ ನಗುತ್ತ ಸೆಲ್ಫಿ ತೆಗೆದುಕೊಂಡು ನಂತರ ಟ್ವೀಟ್‌ ಮಾಡಿದರು.