ಕಾರ್ಗಿಲ್‌ ವಿಜಯ ದಿನದ ನಿಮಿತ್ತ ವಿಶ್ವದ ಅತಿ ಎತ್ತರದ ಸುರಂಗಕ್ಕೆ ಇಂದು ಮೋದಿ ಶಂಕು

| Published : Jul 26 2024, 01:44 AM IST / Updated: Jul 26 2024, 04:42 AM IST

modi kargil

ಸಾರಾಂಶ

ನವದೆಹಲಿ: ಕಾರ್ಗಿಲ್‌ ವಿಜಯ ದಿನದ ನಿಮಿತ್ತ ಕಾರ್ಗಿಲ್‌ಗೆ ಭೇಟಿ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು, ವಿಶ್ವದ ಅತಿ ಎತ್ತರದ ಪ್ರದೇಶದಲ್ಲಿನ ಸುರಂಗ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ.

ನವದೆಹಲಿ: ಕಾರ್ಗಿಲ್‌ ವಿಜಯ ದಿನದ ನಿಮಿತ್ತ ಕಾರ್ಗಿಲ್‌ಗೆ ಭೇಟಿ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು, ವಿಶ್ವದ ಅತಿ ಎತ್ತರದ ಪ್ರದೇಶದಲ್ಲಿನ ಸುರಂಗ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ.ಶಿಂಕುನ್ ಲಾ ಹೆಸರಿನ ಈ ಸುರಂಗ ಯೋಜನೆಯ ಮೊದಲ ಸ್ಫೋಟವನ್ನು ವರ್ಚುವಲ್ ಆಗಿ ನಡೆಸಿ ಯೋಜನೆಗೆ ಚಾಲನೆ ನೀಡಲಿದ್ದರೆ. 

4.1 ಕಿ.ಮೀ. ಉದ್ದದ ಈ ಜೋಡಿ-ಟ್ಯೂಬ್ ಸುರಂಗವನ್ನು ಲೇಹ್‌ಗೆ ಸರ್ವಋತು ಸಂಪರ್ಕ ಒದಗಿಸಲು ನಿಮು-ಪಡುಮ್-ದರ್ಚಾ ರಸ್ತೆಯಲ್ಲಿ 15,800 ಅಡಿ ಎತ್ತರದಲ್ಲಿ ನಿರ್ಮಿಸಲಾಗುತ್ತದೆ. ಒಮ್ಮೆ ಪೂರ್ಣಗೊಂಡರೆ, ಇದು ವಿಶ್ವದ ಅತಿ ಎತ್ತರದ ಸುರಂಗವಾಗಲಿದೆ.

ಶಿಂಕುನ್ ಲಾ ಸುರಂಗವು ಭಾರತದ ಸಶಸ್ತ್ರ ಪಡೆಗಳ ಸಂಚಾರ ಮತ್ತು ಸಲಕರಣೆಗಳ ತ್ವರಿತ ಮತ್ತು ಪರಿಣಾಮಕಾರಿ ಸಾಗಣೆಯನ್ನು ಖಚಿತಪಡಿಸುವುದು ಮಾತ್ರವಲ್ಲದೆ ಲಡಾಖ್‌ನಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಿ ಕಚೇರಿ ಹೇಳಿದೆ.