ಸಾರಾಂಶ
ಕೊಯಮತ್ತೂರು: ವಯಸ್ಕರಿಗೆ ತಮ್ಮ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ಬುದ್ಧಿವಂತಿಕೆ ಇದ್ದು, ಅವರಿಗೆ ಮದುವೆಯಾಗುವಂತೆ ಅಥವ ಸನ್ಯಾಸ ಸ್ವೀಕರಿಸುವಂತೆ ನಾವು ಹೇಳುವುದಿಲ್ಲ ಎಂದು ಸದ್ಗುರು ಸ್ಥಾಪಿತ ಈಶ ಸಂಸ್ಥೆ ಹೇಳಿದೆ. ‘ಜನರಿಗೆ ಯೋಗ ಮತ್ತು ಆಧ್ಯಾತ್ಮಿಕತೆ ಕಲಿಸಲು ಈಶ ಫೌಂಡೇಶನ್ ಸ್ಥಾಪಿಸಲಾಗಿದ್ದು, ಇದು ಸನ್ಯಾಸತ್ವ ಸ್ವೀಕರಿಸದ ಹಾಗೂ ಬ್ರಹ್ಮಚರ್ಯ ಪಾಲಿಸುವ ಅನೇಕರಿಗೆ ಆಶ್ರಯ ನೀಡುತ್ತಿದೆ’ ಎಂದು ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.
ವಿವಾಹಿತ ಯುವತಿಯರ ಬ್ರೈನ್‌ವಾಶ್ ಮಾಡಿ ಪರಿವಾರದೊಂದಿಗಿನ ಸಂಬಂಧ ಕಡಿದುಕೊಂಡು ಸನ್ಯಾಸತ್ವ ಸ್ವೀಕರಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ನಿವೃತ್ರ ಪ್ರಧ್ಯಾಪಕ ಡಾ. ಎಸ್. ಕಾಮರಾಜ್ ಆರೊಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಪ್ರಕರಣದ ಸಂಬಂಧ ಸನ್ಯಾಸಿಗಳು ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಸ್ವಇಚ್ಛೆಯಿಂದ ಈಶ ಸಂಸ್ಥೆಯಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದಾರೆ. ವಿಷಯವನ್ನು ಕೋರ್ಟ್ ಕೈಗೆತ್ತಿಕೊಂಡಿರುವುದರಿಂದ ಸತ್ಯ ಮೇಲುಗೈ ಸಾಧಿಸಲಿದೆ. ಇದನ್ನು ಹೊರತುಪಡಿಸಿ ಸಂಸ್ಥೆಯ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ. ನಮ್ಮ ವಿರುದ್ಧ ಸುಳ್ಳು ಮಾಹಿತಿ ಹರಡುವವರ ವಿರುದ್ಧ ಕಾನೂನು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.