ಸಾರಾಂಶ
ದಿಲ್ಲಿಯಲ್ಲಿ 5 ಸಾವಿರ ಕೋಟಿ ರು. ಮೌಲ್ಯದ ಡ್ರಗ್ಸ್ ಜಾಲ ಭೇದಿಸಿದ 1 ವಾರದಲ್ಲೇ ಮತ್ತೊಂದು ಬೃಹತ್ ಡ್ರಗ್ಸ್ ಜಾಲವನ್ನು ಬಯಲಿಗೆ ಎಳೆಯಲಾಗಿದ್ದು, ಗುರುವಾರ 2 ಸಾವಿರ ಕೋಟಿ ರು. ಡ್ರಗ್ಸ್ ಜಪ್ತಿ ಮಾಡಲಾಗಿದೆ.
ಪಿಟಿಐ ನವದೆಹಲಿ
ದಿಲ್ಲಿಯಲ್ಲಿ 5 ಸಾವಿರ ಕೋಟಿ ರು. ಮೌಲ್ಯದ ಡ್ರಗ್ಸ್ ಜಾಲ ಭೇದಿಸಿದ 1 ವಾರದಲ್ಲೇ ಮತ್ತೊಂದು ಬೃಹತ್ ಡ್ರಗ್ಸ್ ಜಾಲವನ್ನು ಬಯಲಿಗೆ ಎಳೆಯಲಾಗಿದ್ದು, ಗುರುವಾರ 2 ಸಾವಿರ ಕೋಟಿ ರು. ಡ್ರಗ್ಸ್ ಜಪ್ತಿ ಮಾಡಲಾಗಿದೆ. ದಾಳಿ ವೇಳೆ 200 ಕೇಜಿ ಕೊಕೇನ್ ವಶಪಡಿಸಿಕೊಳ್ಳಲಾಗಿದೆ.ದೆಹಲಿ ಪೊಲೀಸರ ವಿಶೇಷ ಕೋಶವು ಜಿಪಿಎಸ್ ಮೂಲಕ ಡ್ರಗ್ ಪೂರೈಕೆದಾರನನ್ನು ಪತ್ತೆಹಚ್ಚಿತ್ತು ಹಾಗೂ ಅದರ ಅನುಸಾರ ದಾಳಿ ಮಾಡಿತ್ತು. ಆದರೆ ಪೊಲೀಸರು ಬರುವಷ್ಟರಲ್ಲಿ ಆರೋಪಿ ಲಂಡನ್‌ಗೆ ಪರಾರಿ ಆಗಿದ್ದಾನೆ. ಆದಾಗ್ಯೂ ಪೊಲೀಸರು ಡ್ರಗ್ಸ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ವಾರ ಜಪ್ತಾಗಿದ್ದ 5 ಸಾವಿರ ಕೋಟಿ ರು. ಮೌಲ್ಯದ ಡ್ರಗ್ಸ್ (ತೂಕ 562 ಕೇಜಿ) ಜಾಲಕ್ಕೂ ಈ ಜಾಲಕ್ಕೂ ನಂಟಿದೆ ಎಂದು ಪೊಲೀಸರು ಶಂಕಿಸಿದ್ದಾರೆ.ಇದರೊಂದಿಗೆ ಗುರುವಾರದ್ದೂ ಸೇರಿ ಪೊಲೀಸರು ಒಂದು ವಾರದಲ್ಲಿ ₹ 7000 ಕೋಟಿ ಮೌಲ್ಯದ 762 ಕೆಜಿ ಡ್ರಗ್ಸ್ ವಶಪಡಿಸಿಕೊಂಡಂತಾಗಿದೆ . ಇದು ದೇಶದಲ್ಲೇ ಅತಿ ಹೆಚ್ಚು ಡ್ರಗ್ಸ್ ಸಾಗಾಟವಾಗಿದೆ.==
ಕೇರಳ ಡ್ರಗ್ಸ್ ಪ್ರಕರಣ: ನಟ ಶ್ರೀನಾಥ್ ಭಾಸಿ ವಿಚಾರಣೆಕೊಚ್ಚಿ: ಮಲಯಾಳಂ ಚಿತ್ರರಂಗದಲ್ಲಿ ಸೆಕ್ಸ್ ಹಗರಣದ ಬಳಿಕ ಬೆಳಕಿಗೆ ಬಂದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಲಯಾಳಂ ನಟ ಶ್ರೀನಾಥ್ ಭಾಸಿ ಅವರನ್ನು ಗುರುವಾರ ವಿಚಾರಣೆ ನಡೆಸಿದ್ದಾರೆ.ಇತ್ತೀಚೆಗೆ ಕುಖ್ಯಾತ ಗ್ಯಾಂಗ್‌ಸ್ಟರ್ ಪ್ರಕಾಶ್ ಮತ್ತು ಆತನ ಸಹಚರರನ್ನು ಪೊಲೀಸರು ಹೋಟೆಲೊಂದರಲ್ಲಿ ಬಂಧಿಸಿದ್ದರು. ಅಲ್ಲಿ ಶಂಕಿತ ಡ್ರಗ್ಸ್ ಪತ್ತೆಯಾಗಿತ್ತು. ಆಗ ಪ್ರಕಾಶ್ ತಾನು ನಟರು, ಗಣ್ಯರ ಪಾರ್ಟಿಗಳಿಗೆ ಕೊಕೇನ್ ನೀಡಿದ್ದಾಗಿ ಹೇಳಿದ್ದ ಹಾಗೂ ಶ್ರೀನಾಥ್ ಮತ್ತು ನಟಿ ಪ್ರಯಾಗಾ ಮಾರ್ಟಿನ್ ಹೆಸರು ಬಾಯಿಬಿಟ್ಟಿದ್ದ. ಇಬ್ಬರ ಪೈಕಿ ಈಗ ಶ್ರೀನಾಥ್‌ರನ್ನು ವಿಚಾರಣೆ ಮಾಡಲಾಗಿದೆ.