ಸಾರಾಂಶ
ಪಿಟಿಐ ಚೆನ್ನೈಶಾಸಕ ಹಾಗೂ ಡಿಎಂಕೆ ಹಿರಿಯ ನಾಯಕ ಕೆ ಪೊನ್ಮುಡಿ ಅವರನ್ನು ಸಚಿವರನ್ನಾಗಿ ನೇಮಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾಡಿದ ಮನವಿಗೆ ರಾಜ್ಯಪಾಲ ಆರ್.ಎನ್. ರವಿ ನಿರಾಕರಿಸಿದ್ದಾರೆ. ಇದು ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಮತ್ತೊಂದು ಸಂಘರ್ಷಕ್ಕೆ ಕಾರಣವಾಗಿದೆ. ರವಿ ನಿರ್ಧಾರದ ವಿರುದ್ಧ ಡಿಎಂಕೆ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗಿದೆ.ಮದ್ರಾಸ್ ಹೈಕೋರ್ಟಿನಿಂದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆಲವು ತಿಂಗಳ ಹಿಂದೆ ಪೊನ್ಮುಡಿಗೆ ಶಿಕ್ಷೆ ಆಗಿತ್ತು. ಆಗ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಆದರೆ ಇತ್ತೀಚೆಗೆ ಸುಪ್ರೀಂ ಕೋರ್ಟು ಅವರ ಶಿಕ್ಷೆ ಅಮಾನತುಗೊಳಿಸಿದೆ. ಹೀಗಾಗಿ ಅವರನ್ನು ಸಂಪುಟಕ್ಕೆ ಮರುಸೇರ್ಪಡೆಗೊಳಿಸುವಂತೆ ರವಿಗೆ ಸ್ಟಾಲಿನ್ ಪತ್ರ ಬರೆದಿದ್ದರು.ಆದರೆ, ರವಿ ಅದಕ್ಕೆ ನಿರಾಕರಿಸಿದ್ದು, ‘ಪೊನ್ಮುಡಿ ಶಿಕ್ಷೆ ಸಂಪೂರ್ಣ ರದ್ದಾಗಿಲ್ಲ. ಅವರ ಶಿಕ್ಷೆಯನ್ನು ಸುಪ್ರೀಂ ಕೋರ್ಟು ಅಮಾನತಿನಲ್ಲಿರಿಸಿದೆ ಅಷ್ಟೆ’ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ‘ನಿರಾಕರಣೆ’ ಮಾಡಿರುವುದು ಸಂವಿಧಾನದ ಉಲ್ಲಂಘನೆಯಾಗಿದ್ದು, ರವಿ ಅಧಿಕಾರ ನಡೆಸಲು ಅನರ್ಹರು’ ಎಂದಿದೆ. ಇದರ ವಿಚಾರಣೆಗೆ ಸುಪ್ರೀಂ ಒಪ್ಪಿಕೊಂಡಿದೆ.