ಸಾರಾಂಶ
ಬಿಹಾರದಲ್ಲಿ ಹೊಸ ಶಕ್ತಿಯಾಗಿ ಉದ್ಭವಿಸಲು ಹಾತೊರೆಯುತ್ತಿರುವ ಚುನಾವಣಾ ರಣತಂತ್ರಗಾರ ಮತ್ತು ಜನ್ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್‌ಗೆ ಬಿಹಾರ ಉಪಚುನಾವಣೆಯಲ್ಲಿ ಭಾರೀ ಮುಖಭಂಗವಾಗಿದೆ.
ಪಟನಾ: ಬಿಹಾರದಲ್ಲಿ ಹೊಸ ಶಕ್ತಿಯಾಗಿ ಉದ್ಭವಿಸಲು ಹಾತೊರೆಯುತ್ತಿರುವ ಚುನಾವಣಾ ರಣತಂತ್ರಗಾರ ಮತ್ತು ಜನ್ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್‌ಗೆ ಬಿಹಾರ ಉಪಚುನಾವಣೆಯಲ್ಲಿ ಭಾರೀ ಮುಖಭಂಗವಾಗಿದೆ.
ಇಮಾಮ್‌ಗಂಜ್, ತರಾರಿ, ರಾಮಗಢ ಮತ್ತು ಬೆಲಾಗಂಜ್ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಜನ್ ಸುರಾಜ್ ಪಕ್ಷ ಕಣಕ್ಕೆ ಇಳಿದಿತ್ತು. ಆದರೆ ಮೊದಲ ಚುನಾವಣೆಯಲ್ಲಿ ಪಕ್ಷದ ಎಲ್ಲಾ ನಾಲ್ವರು ಅಭ್ಯರ್ಥಿಗಳು ಸೋತಿದ್ದಾರೆ. ಜೊತೆಗೆ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಎಲ್ಲಾ 4 ಸ್ಥಾನಗಳು ಎನ್‌ಡಿಎ ಪಾಲಾಗಿದೆ.