ತೈಮೂರ್‌, ಬಾಬರ್‌ ಯುಗದಲ್ಲಿ ಭಾರತದಲ್ಲಿ ಹಿಂದೂಗಳೇ ಇರಲಿಲ್ಲ: ಟಿಎಂಸಿ ಅಭ್ಯರ್ಥಿ

| Published : Mar 24 2024, 01:36 AM IST / Updated: Mar 24 2024, 03:53 PM IST

ತೈಮೂರ್‌, ಬಾಬರ್‌ ಯುಗದಲ್ಲಿ ಭಾರತದಲ್ಲಿ ಹಿಂದೂಗಳೇ ಇರಲಿಲ್ಲ: ಟಿಎಂಸಿ ಅಭ್ಯರ್ಥಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದುತ್ವ ಎಂಬುದು ಕೇವಲ 300-400 ವರ್ಷಗಳ ಹಿಂದೆ ಉಗಮವಾಗಿದೆ.

ಕೋಲ್ಕತಾ: ಹಿಂದುತ್ವ ಎಂಬುದು ಕೇವಲ 300-400 ವರ್ಷಗಳ ಹಿಂದೆ ಉಗಮವಾಗಿದೆ. ಆದರೆ ಮುಸಲ್ಮಾನರು ಭಾರತಕ್ಕೆ 800 ವರ್ಷಗಳ ಹಿಂದೆಯೇ ಬಂದಿದ್ದರು ಎಂದು ಹೇಳುವ ಮೂಲಕ ಹೌರಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಪ್ರಸೂನ್‌ ಬ್ಯಾನರ್ಜಿ ವಿವಾದ ಸೃಷ್ಟಿಸಿದ್ದಾರೆ. 

ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಬ್ಯಾನಜಿ, ‘ಈ ಹಿಂದೂಗಳೆಂದರೆ ಯಾರು? ಮುಸಲ್ಮಾನರು ಭಾರತಕ್ಕೆ 800 ವರ್ಷಗಳ ಹಿಂದೆಯೇ ಬಂದರು. 

ಆಗ ಯಾವ ಹಿಂದೂಗಳೂ ನಮ್ಮ ದೇಶದಲ್ಲಿ ಇರಲಿಲ್ಲ. ಅದರಲ್ಲೂ ತೈಮೂರ್, ಬಾಬರ್‌ನಂತಹ ಸಾಮ್ರಾಟರು ನಮ್ಮ ದೇಶವನ್ನು ಆಳುವಾಗ ಇಲ್ಲಿ ಹಿಂದೂಗಳೇ ಇರಲಿಲ್ಲ. 

ಹಿಂದುತ್ವ ಎಂಬುದು 300-400 ವರ್ಷಗಳ ಮುಂಚಿನಿಂದ ಮಾತ್ರ ಹುಟ್ಟಿಕೊಂಡಿದೆ’ ಎಂದು ತಿಳಿಸಿದ್ದಾರೆ. ಇ

ದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿ, ಹಿಂದೂಗಳ ಅಸ್ತಿತ್ವದ ಕುರಿತು ಸುಳ್ಳುಸುದ್ದಿ ಹಬ್ಬಿಸುವ ಮೂಲಕ ಪ್ರಸೂನ್‌ ಭಾರತದ ಇತಿಹಾಸಕ್ಕೆ ಅವಮಾನ ಮಾಡುವ ಜೊತೆಗೆ ಕೋಮುಗಳ ನಡುವೆ ದ್ವೇಷದ ಕಿಡಿ ಹಬ್ಬಿಸುವ ಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.