ಸಾರಾಂಶ
ಭೂಸ್ವಾಧೀನಕ್ಕೆ ಹೆಚ್ಚಿನ ಪರಿಹಾರ ಹಾಗೂ ಅದರಲ್ಲಿ ಹೆಚ್ಚಿನ ಪಾಲಿಗೆ ಆಗ್ರಹಿಸಿ ಆಗ್ರಹಿಸಿ ಸೋಮವಾರ ಉತ್ತರ ಭಾರತದ ವಿವಿಧ ಭಾಗಗಳ ರೈತರು ‘ದೆಹಲಿ ಚಲೋ’ ನಡೆಸಿದರು.
ನವದೆಹಲಿ: ಭೂಸ್ವಾಧೀನಕ್ಕೆಹೆಚ್ಚಿನ ಪರಿಹಾರ ಹಾಗೂ ಅದರಲ್ಲಿ ಹೆಚ್ಚಿನ ಪಾಲಿಗೆ ಆಗ್ರಹಿಸಿ ಆಗ್ರಹಿಸಿ ಸೋಮವಾರ ಉತ್ತರ ಭಾರತದ ವಿವಿಧ ಭಾಗಗಳ ರೈತರು ‘ದೆಹಲಿ ಚಲೋ’ ನಡೆಸಿದರು.
ತಮ್ಮ ಬೇಡಿಕೆಗಳು ನೇರವಾಗಿ ಸಂಸತ್ತನ್ನು ತಲುಪಲಿ ಎಂದು ಸಂಸತ್ತಿನ ಚಳಿಗಾಲ ಅಧಿವೇಶನದ ವೇಳೆಯೇ ರೈತರು ಈ ಪ್ರತಿಭಟನೆ ನಡೆಸಿದರು. ಭಾರತೀಯ ಕಿಸಾನ್ ಪರಿಷತ್ , ಕಿಸಾನ್ ಮಜ್ದೂರ್ ಮೋರ್ಚಾ, ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ವಿವಿಧ ರೈತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಬೇಡಿಕೆ ಏನು?:
ಹಳೆ ಸ್ವಾಧೀನ ಕಾನೂನಿನಡಿ ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಶೇ.10ರಷ್ಟು ನಿವೇಶನ ಹಂಚಿಕೆ ಮಾಡಬೇಕು ಹಾಗೂ ಪರಿಹಾರವನ್ನು ,ಮಾರುಕಟ್ಟೆ ದರಕ್ಕಿಂತ ಶೇ.64ರಷ್ಟು ಹೆಚ್ಚಿಸಬೇಕು. 2014ರ ಜನವರಿ 1ರ ನಂತರ ಸ್ವಾಧೀನಪಡಿಸಿಕೊಂಡ ಭೂಮಿಗೆ ಶೇ.20ರಷ್ಟು ನಿವೇಶನ ನೀಡಬೇಕು. ರೈತರಿಗೆ ಉದ್ಯೋಗ ಮತ್ತು ಪುನರ್ವಸತಿ ಯೋಜನೆಗಳನ್ನು ನೀಡಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಇರಿಸಿದರು.ದೆಹಲಿ ಚಲೋ ಮೆರವಣಿಗೆಯಿಂದಾಗಿ ದೆಹಲಿ ಮತ್ತು ನೋಯ್ಡಾ ಗಡಿ ಭಾಗದಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದ ಸನ್ನಿವೇಶ ಕೂಡ ಕಂಡು ಬಂತು. ಕೆಲವೆಡೆ ಹೈವೇಗಳಲ್ಲಿ ಬ್ಯಾರಿಕೇಡ್ ಜಿಗಿಯಲೂ ರೈತರು ಯತ್ನಿಸಿದರು. ಸಂಜೆ ವೇಳೆ ಊರುಗಳಿಗೆ ಮರಳಿದರು.