ಸಾರಾಂಶ
ಪ್ರತಿಭಟನೆ, ಹಿಂಸಾಚಾರದಿಂದ ಅರಾಜಕತೆ ಸೃಷ್ಟಿಯಾಗಿರುವ ನೇಪಾಳದಲ್ಲಿ, ಗುರುವಾರ ಶಾಂತ ಸ್ಥಿತಿ ಇದೆ. ಕರ್ಫ್ಯೂ ಹಾಗೂ ಪ್ರತಿಬಂಧಕಾಜ್ಞೆಯನ್ನು ಕೊಂಚ ಸಡಿಲಿಸಲಾಗಿದೆ ಹಾಗೂ ಜನ ಸಂಚಾರಕ್ಕೆ ಕೆಲವು ಗಂಟೆಗಳ ಕಾಲ ಅವಕಾಶ ನೀಡಲಾಗಿದೆ.
- ಸೇನೆಯಿಂದ ಬಿಗಿ ಕ್ರಮ ಮುಂದುವರಿಕೆ
- ಸಾವಿನ ಸಂಖ್ಯೆ 34ಕ್ಕೇರಿಕೆ । 1,061 ಜನರಿಗೆ ಗಾಯಪಿಟಿಐ ಕಾಠ್ಮಂಡು
ಪ್ರತಿಭಟನೆ, ಹಿಂಸಾಚಾರದಿಂದ ಅರಾಜಕತೆ ಸೃಷ್ಟಿಯಾಗಿರುವ ನೇಪಾಳದಲ್ಲಿ, ಗುರುವಾರ ಶಾಂತ ಸ್ಥಿತಿ ಇದೆ. ಕರ್ಫ್ಯೂ ಹಾಗೂ ಪ್ರತಿಬಂಧಕಾಜ್ಞೆಯನ್ನು ಕೊಂಚ ಸಡಿಲಿಸಲಾಗಿದೆ ಹಾಗೂ ಜನ ಸಂಚಾರಕ್ಕೆ ಕೆಲವು ಗಂಟೆಗಳ ಕಾಲ ಅವಕಾಶ ನೀಡಲಾಗಿದೆ.ಗುರುವಾರ ಸಂಜೆ 7ರಿಂದ ಶುಕ್ರವಾರ ಬೆಳಿಗ್ಗೆ 6ರವರೆಗೂ ದೇಶದ ಹಲವೆಡೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಆದರೂ ಜನರ ಹಿತಾಸಕ್ತಿ ಕಾರಣ ಅಷ್ಟು ಬಿಗಿ ಧೋರಣೆ ಅನುಸರಿಸಲಾಗುತ್ತಿಲ್ಲ. ಸೇನೆ ದೇಶದೆಲ್ಲೆಡೆ ಬಿಗಿ ಕಾವಲು ಕಾಯುತ್ತಿದೆ,
ಈ ನಡುವೆ, ಸಂಘರ್ಷದ ವೇಳೆ ಸಾವನ್ನಪ್ಪಿದವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. 1,061 ಜನರಿಗೆ ಗಾಯಗಳಾಗಿವೆ. 719 ಜನ ಆಸ್ಪತ್ರೆಯಿಂದ ಬಿಡುಗಡೆಯಾದರೆ, 274 ಮಂದಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ನೇಪಾಳದ ಆರೋಗ್ಯ ಮತ್ತು ಜನಸಂಖ್ಯೆ ಸಚಿವಾಲಯ ಮಾಹಿತಿ ನೀಡಿದೆ.