ಪಂಜಾಬ್‌ನಲ್ಲಿ ಅ.15ಕ್ಕೆ ಗ್ರಾಮ ಪಂಚಾಯತ್‌ ಚುನಾವಣೆ: ಸರಪಂಚ್‌ ಹುದ್ದೆಗೆ ಭರ್ಜರಿ 2 ಕೋಟಿ ರು.ಬಿಡ್ಡಿಂಗ್‌!

| Published : Oct 02 2024, 01:15 AM IST / Updated: Oct 02 2024, 08:29 AM IST

ಪಂಜಾಬ್‌ನಲ್ಲಿ ಅ.15ಕ್ಕೆ ಗ್ರಾಮ ಪಂಚಾಯತ್‌ ಚುನಾವಣೆ: ಸರಪಂಚ್‌ ಹುದ್ದೆಗೆ ಭರ್ಜರಿ 2 ಕೋಟಿ ರು.ಬಿಡ್ಡಿಂಗ್‌!
Share this Article
  • FB
  • TW
  • Linkdin
  • Email

ಸಾರಾಂಶ

ಪಂಜಾಬ್‌ನಲ್ಲಿ ಅ.15ಕ್ಕೆ ಗ್ರಾಮ ಪಂಚಾಯತ್‌ ಚುನಾವಣೆಗಳು ನಡೆಯಲಿದ್ದು, ಸರಪಂಚ್‌ ಹುದ್ದೆಗೆ ಭರ್ಜರಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ.

ಚಂಡಿಗಢ: ಪಂಜಾಬ್‌ನಲ್ಲಿ ಅ.15ಕ್ಕೆ ಗ್ರಾಮ ಪಂಚಾಯತ್‌ ಚುನಾವಣೆಗಳು ನಡೆಯಲಿದ್ದು, ಸರಪಂಚ್‌ ಹುದ್ದೆಗೆ ಭರ್ಜರಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ.

ರಾಜ್ಯದ ಹಲವು ಗ್ರಾಮಗಳಲ್ಲಿ ಅತಿ ಹೆಚ್ಚು ಹಣವನ್ನು ಬಿಡ್‌ ಮಾಡಿ ಗೆದ್ದವರನ್ನು ಆಯ್ಕೆ ಮಾಡುವ ಸಂಪ್ರದಾಯ ಹಲವು ವರ್ಷಗಳಿಂದ ಪಾಲನೆಯಾಗುತ್ತಿದೆ. ಹೀಗೆ ನೀಡಿದ ಹಣವನ್ನು ಗ್ರಾಮದ ಅಭಿವೃದ್ಧಿಗೆ ಬಳಸಲಾಗುವುದು. 

ಇದೇ ಮಾದರಿಯಲ್ಲಿ ಗುರುದಾಸ್‌ಪುರ ಜಿಲ್ಲೆಯ ಹರ್ದೋವಲ್‌ ಕಲಾನ್‌ ಎಂಬ ಗ್ರಾಮದಲ್ಲಿ ಬರೋಬ್ಬರಿ 2 ಕೋಟಿ ರು. ವರೆಗೂ ಬಿಡ್ಡಿಂಗ್‌ ನಡೆದಿದೆ. ಸ್ಥಳೀಯ ಬಿಜೆಪಿ ನಾಯಕ ಆತ್ಮಸಿಂಗ್‌ ಅವರು 2 ಕೋಟಿ. ರು. ಚೆಕ್‌ ಮೂಲಕ ಬಿಡ್ಡಿಂಗ್‌ ಮಾಡಿದ್ದಾರೆ. ಬಠಿಂಡಾದ ಗೆಹ್ರಿ ಬಟ್ಟಾರ್‌ ಗ್ರಾಮದಲ್ಲಿ ಇದೇ ರೀತಿಯ ಬಿಡ್ಡಿಂಗ್‌ ನಡೆಸಿದ್ದು, ಆಕಾಕ್ಷಿಂಗಳಲ್ಲಿ ಒಬ್ಬ 60 ಲಕ್ಷ ರು. ಬಿಡ್‌ ಮಾಡಿದ್ದಾರೆ.

ಈ ಹರಾಜು ವಿಧಾನವನ್ನು ಕೆಲ ರಾಜಕೀಯ ಮುಖಂಡರು ಖಂಡಿಸಿದ್ದು, ಪ್ರಜಾಪ್ರಭುತ್ವ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಹರಾಜಿನ ಆಯೋಜಕರನ್ನು ಜೈಲಿಗೆ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.