ಪಂಜಾಬ್ ಸಿಎಂ ಭಗವಂತ ಮಾನ್‌ ದಂಪತಿಗೆ ಹೆಣ್ಣು ಮಗು

| Published : Mar 29 2024, 12:45 AM IST / Updated: Mar 29 2024, 08:37 AM IST

ಸಾರಾಂಶ

ಪಂಜಾಬಿನ ಮುಖ್ಯಮಂತ್ರಿ ಭಗವಂತ ಮಾನ್‌ ಅವರ ಪತ್ನಿ ಗುರುವಾರ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

ಚಂಡೀಗಢ: ಪಂಜಾಬಿನ ಮುಖ್ಯಮಂತ್ರಿ ಭಗವಂತ ಮಾನ್‌ ಅವರ ಪತ್ನಿ ಗುರುವಾರ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

ಈ ಕುರಿತು ಮಾನ್ ತಮ್ಮ ಟ್ವೀಟರ್‌ ಖಾತೆಯಲ್ಲಿ ತನ್ನ ಮಗುವಿನ ಪೋಟೋ ಹಂಚಿಕೊಂಡು, ‘ದೇವರು ನಮಗೆ ಹೆಣ್ಣುಮಗುವನ್ನು ಕರುಣಿಸಿದ್ದಾನೆ, ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ’ ಎಂದು ಫೋಸ್ಟ್‌ ಮಾಡಿದ್ದಾರೆ.

ಮಾನ್‌ ತಮ್ಮ ಮೊದಲನೇ ಪತ್ನಿಗೆ 2015ರಲ್ಲಿ ವಿಚ್ಛೇದನ ನೀಡಿ ನಂತರ 2022ರಲ್ಲಿ ಗುರುಪ್ರೀತ್‌ ಕೌರ್‌ ಅವರನ್ನು ವಿವಾಹವಾಗಿದ್ದರು. ಮೊದಲನೇ ಪತ್ನಿಗೆ ಇಬ್ಬರು ಮಕ್ಕಳಿದ್ದಾರೆ.