ಸಾರಾಂಶ
ಹಲವು ಶಂಕಿತ ಭಯೋತ್ಪಾದಕರು ಸ್ಫೋಟಕಗಳೊಂದಿಗೆ ಪ್ರಯಾಣಿಸುತ್ತಿದ್ದಾರೆ ಎಂದು ರೈಲ್ವೆ ಅಧಿಕಾರಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಎಚ್ಚರಿಕೆ ಸಂದೇಶವೊಂದು ಕಂಡುಬಂದ ಕಾರಣ ಉತ್ತರ ಪ್ರದೇಶದ ತುಂಡ್ಲಾ ರೈಲು ನಿಲ್ದಾಣದಲ್ಲಿ ಪುರಿ-ನವದೆಹಲಿ ಪುರುಷೋತ್ತಮ್ ಎಕ್ಸ್‌ಪ್ರೆಸ್ ಅನ್ನು 3 ಗಂಟೆಗಳ ಕಾಲ ನಿಲ್ಲಿಸಿ ತಪಾಸಣೆ ಮಾಡಲಾಗಿದೆ. ಆದರೆ ತಪಾಸಣೆ ಬಳಿಕ ಇದು ಹುಸಿ ಸಂದೇಶ ಎಂದು ಸಾಬೀತಾಗಿದೆ.
ಪಿಟಿಐ ನವದೆಹಲಿ
ಹಲವು ಶಂಕಿತ ಭಯೋತ್ಪಾದಕರು ಸ್ಫೋಟಕಗಳೊಂದಿಗೆ ಪ್ರಯಾಣಿಸುತ್ತಿದ್ದಾರೆ ಎಂದು ರೈಲ್ವೆ ಅಧಿಕಾರಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಎಚ್ಚರಿಕೆ ಸಂದೇಶವೊಂದು ಕಂಡುಬಂದ ಕಾರಣ ಉತ್ತರ ಪ್ರದೇಶದ ತುಂಡ್ಲಾ ರೈಲು ನಿಲ್ದಾಣದಲ್ಲಿ ಪುರಿ-ನವದೆಹಲಿ ಪುರುಷೋತ್ತಮ್ ಎಕ್ಸ್‌ಪ್ರೆಸ್ ಅನ್ನು 3 ಗಂಟೆಗಳ ಕಾಲ ನಿಲ್ಲಿಸಿ ತಪಾಸಣೆ ಮಾಡಲಾಗಿದೆ. ಆದರೆ ತಪಾಸಣೆ ಬಳಿಕ ಇದು ಹುಸಿ ಸಂದೇಶ ಎಂದು ಸಾಬೀತಾಗಿದೆ.‘ಕೆಲವು ಶಂಕಿತ ಭಯೋತ್ಪಾದಕರು ರೈಲಿನಲ್ಲಿ ಸ್ಫೋಟಕಗಳೊಂದಿಗೆ ಪ್ರಯಾಣಿಸುತ್ತಿದ್ದರು ಎಂದು ಎಕ್ಸ್ ಹ್ಯಾಂಡಲ್‌ನಿಂದ ನಮಗೆ ಮಾಹಿತಿ ಬಂದಿತ್ತು. ಆಗ ಎಲ್ಲಾ ಕೋಚ್‌ಗಳಲ್ಲಿದ್ದ ಪ್ರಯಾಣಿಕರನ್ನು ಎಚ್ಚರಿಸಲಾಯಿತು ಮತ್ತು ಅವರ ಲಗೇಜ್‌ಗಳನ್ನು ಮೆಟಲ್ ಡಿಟೆಕ್ಟರ್‌ಗಳು ಮತ್ತು ಶ್ವಾನ ದಳಗಳ ಮೂಲಕ ಪರಿಶೀಲಿಸಲಾಯಿತು ಆದರೆ ಏನೂ ಕಂಡುಬಂದಿಲ್ಲ. ಬಳಿಕ ಅದು ಹುಸಿ ಸಂದೇಶ ಎಂದು ಸಾಬೀತಾಗಿದೆ’ ಎಂದು ಪ್ರಯಾಗ್‌ರಾಜ್ ರೈಲು ವಿಭಾಗದ ಅಧಿಕಾರಿ ತಿಳಿಸಿದ್ದಾರೆ.ಈ ನಡುವೆ ರೈಲು ತಪಾಸಣೆಗೆ ಇಷ್ಟು ಸಮಯ ಬೇಕೆ? ತಪಾಸಣೆಗೆ ವ್ಯವಸ್ಥೆಯೇ ನಿಮ್ಮ ಬಳಿ ಇಲ್ಲವೇ? ಎಂದು ಪ್ರಯಾಣಿಕರು ರೈಲ್ವೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.