ಸಾರಾಂಶ
ಪುಷ್ಪ 2 : ದಿ ರೂಲ್’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ದಕ್ಷಿಣದ ಖ್ಯಾತ ನಟರಾದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ನೋಡಲು ಬಿಹಾರ ರಾಜಧಾನಿ ಪಟನಾದ ಗಾಂಧಿ ಮೈದಾನದಲ್ಲಿ ಭಾನುವಾರ ನೂಕುನುಗ್ಗಲು ಉಂಟಾದ ಘಟನೆ ನಡೆದಿದೆ.
ಪಟನಾ: ‘ಪುಷ್ಪ 2: ದಿ ರೂಲ್’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ದಕ್ಷಿಣದ ಖ್ಯಾತ ನಟರಾದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ನೋಡಲು ಬಿಹಾರ ರಾಜಧಾನಿ ಪಟನಾದ ಗಾಂಧಿ ಮೈದಾನದಲ್ಲಿ ಭಾನುವಾರ ನೂಕುನುಗ್ಗಲು ಉಂಟಾದ ಘಟನೆ ನಡೆದಿದೆ.
ಇವರನ್ನು ನೋಡಲು ಜಮಾಯಿಸಿದ ಭಾರೀ ಜನಸಮೂಹವನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಲಾಠಿ ಚಾರ್ಜ್ ಮಾಡಿದ್ದಾರೆ. ದಕ್ಷಿಣದ ನಟರಾಗಿದ್ದರೂ ಬಿಹಾರದಲ್ಲಿ ಇವನ್ನು ನೋಡಲು ಸೇರಿದ್ದ ಜನಸ್ತೋಮ ಅಚ್ಚರಿ ಮೂಡಿಸುವಂತಿತ್ತು. ಈ ನಡುವೆ, ಸಮಾರಂಭಕ್ಕೆ ನಟರು ತಡವಾಗಿ ಬಂದ ಬಗ್ಗೆ ಅಭಿಮಾನಿಗಳು ಕೋಪಗೊಂಡ ಘಟನೆಯೂ ನಡೆಯಿತು.