ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಜಸರಾಜ್ ಅವರ ಪತ್ನಿ ಮಧುರಾ ಜಸರಾಜ್ ಮುಂಬೈನಲ್ಲಿ ನಿಧನ

| Published : Sep 26 2024, 10:20 AM IST / Updated: Sep 26 2024, 11:13 AM IST

ಸಾರಾಂಶ

ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಜಸರಾಜ್ ಅವರ ಪತ್ನಿ ಮಧುರಾ ಜಸರಾಜ್ (86) ಬುಧವಾರ ಬೆಳಿಗ್ಗೆ ಮುಂಬೈನಲ್ಲಿ ನಿಧನರಾದರು.  

ನವದೆಹಲಿ: ಶಾಸ್ತ್ರೀಯ ಸಂಗೀತ ಗಾಯಕ. ದಿ.ಪಂಡಿತ್‌ ಜಸರಾಜ್‌ ಅವರ ಪತ್ನಿ ಚಲನಚಿತ್ರ ನಿರ್ಮಾಪಕಿ ಮಧುರಾ ಜಸರಾಜ್‌ (86) ಬುಧವಾರ ಬೆಳಿಗಿನ ಜಾವ ವಯೋಸಹಜವಾಗಿ ಮುಂಬೈನಲ್ಲಿ ನಿಧನರಾದರು.

ಮುಂಬೈನ ಓಶಿವಾರಾ ಚಿತಾಗಾರದಲ್ಲಿ ಬುಧವಾರ ಸಂಜೆ ಮಧುರಾ ಜಸ್‌ರಾಜ್‌ ಅವರ ಅಂತಿಮ ವಿಧಿ ನೆರವೇರಿತು. ಸಂಗೀತ ನಿರ್ದೇಶಕ ಶಾರಂಗ್ ದೇವ್ ಪಂಡಿತ್, ಕಿರುತೆರೆ ನಟಿ ದುರ್ಗಾ ಜಸರಾಜ್‌- ಇವರ ಮಕ್ಕಳು.

ಮಧುರಾ ಅವರು ಹೆಸರಾಂತ ಚಿತ್ರ ನಿರ್ಮಾಪಕ ವಿ.ಶಾಂತಾರಾಮ್‌ ಅವರ ಪುತ್ರಿ. 1962ರಲ್ಲಿ ಜಸರಾಜ್‌ರನ್ನು ವಿವಾಹವಾಗಿದ್ದರು. ಅವರು ಬರಹಗಾರ್ತಿ ಮತ್ತು ಚಲನಚಿತ್ರ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಕುಸಿದ ಸ್ಥಳದಲ್ಲೇ ಹೊಸ ಶಿವಾಜಿ ಪ್ರತಿಮೆ ನಿರ್ಮಾಣಕ್ಕೆ ಟೆಂಡರ್‌ಮುಂಬೈ: ಇತ್ತೀಚೆಗೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹರಾಜರ ಪ್ರತಿಮೆ ಕುಸಿದ ಕಾರಣ ಅದೇ ಜಾಗದಲ್ಲಿ 60 ಅಡಿ ಎತ್ತರದ ಹೊಸ ಶಿವಾಜಿ ಪ್ರತಿಮೆ ನಿರ್ಮಾಣಕ್ಕೆ ಬುಧವಾರ ಮಹಾರಾಷ್ಟ್ರ ಸರ್ಕಾರ ಟೆಂಡರ್‌ ಕರೆದಿದೆ.20 ಕೋಟಿ ರು. ವೆಚ್ಚದಲ್ಲಿ ಪ್ರತಿಮೆ ನಿರ್ಮಾಣವಾಗಲಿದ್ದು, ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ 6 ತಿಂಗಳು ಕಾಲಾವಕಾಶ ನೀಡಿದೆ.

ಕಳೆದ ಡಿ.4 ರಂದು 35 ಅಡಿ ಎತ್ತರದ ಶಿವಾಜಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾವರಣಗೊಳಿಸಿದ್ದರು. ಆದರೆ ಆ. 26ರಂದು ಆ ಪ್ರತಿಮೆ ಕುಸಿದು ಬಿದ್ದಿತ್ತು. ನಿರ್ಮಾಣದಲ್ಲಿ ಭಾಗಿಯಾಗಿದ್ದ ಶಿಲ್ಪಿ ಹಾಗೂ ಸಲಹೆಗಾರನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಹ್ಯುಂಡೈ ಮೋಟಾರ್‌ ಷೇರು ಮಾರುಕಟ್ಟೆ ಪ್ರವೇಶಕ್ಕೆ ಸೆಬಿ ಅನುಮತಿನವದೆಹಲಿ: ಹ್ಯುಂಡೈ ಮೋಟಾರ್‌ ಇಂಡಿಯಾ ಕಂಪನಿ ಭಾರತದಲ್ಲಿ ಷೇರು ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಆರಂಭಿಕ ಷೇರುಗಳನ್ನು (ಐಪಿಒ) ಬಿಡುಗಡೆ ಮಾಡಲು ನಿರ್ಧರಿಸಿದೆ. ಐಪಿಒ ಪ್ರಾರಂಭಕ್ಕೆ ಷೇರುಪೇಟೆ ನಿಯಂತ್ರಕ (ಸೆಬಿ) ಅನುಮತಿ ನೀಡಿದೆ.2003ರಲ್ಲಿ ಮಾರುತಿ ಸುಜುಕಿ ಐಪಿಒ ಪ್ರಾರಂಭಿಸಿದ ಬಳಿಕ, ಈ ಕೊಡುಗೆ ಪ್ರಾರಂಭಿಸುತ್ತಿರುವ 2ನೇ ಆಟೋ ಮೊಬೈಲ್‌ ಕಂಪನಿ ಇದಾಗಿದೆ. ಹುಂಡೈ ಮೋಟಾರ್‌ ಕಂಪನಿ ಈ ವರ್ಷ ಐಪಿಒ ಮೂಲಕ ಸುಮಾರು 20 ಸಾವಿರ ಕೋಟಿ ರು. ಗಳಿಸುವ ನಿರೀಕ್ಷೆಯನ್ನು ಹೊಂದಿದೆ. ಈ ಮೂಲಕ ಕಂಪನಿಯಲ್ಲಿ ಹ್ಯುಂಡೈ ಪಾಲು ಶೇ.15ರಿಂದ 20ರಷ್ಟು ತಗ್ಗಲಿದೆ.

ಆರ್‌ಎಸ್‌ಎಸ್‌ ಇಲಿ ಇದ್ದಂತೆ, ರಾಜ್ಯದಿಂದ ಓಡಿಸಿ: ಸೊರೇನ್‌

ರಾಂಚಿ: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಇಲಿ ಇದ್ದಂತೆ. ರಾಜ್ಯವನ್ನು ಅದು ಹಾಳು ಮಾಡುತ್ತಿದೆ. ಹೀಗಾಗಿ ರಾಜ್ಯದ ಹಳ್ಳಿಗಳಿಂದ ಅದನ್ನು ಓಡಿಸಿ’ ಎಂದು ಜಾರ್ಖಂಡ್‌ ಸಿಎಂ ಹೇಮಂತ್ ಸೊರೇನ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಸಿಎಂ, ‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಚುನಾವಣೆಯಲ್ಲಿ ಲಾಭಗಳಿಸಲು ಕೋಮು ಸೌಹಾರ್ದತೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾವೆ. ಆರೆಸ್ಸೆಸ್‌, ರಾಜ್ಯದಲ್ಲಿ ಇಲಿಗಳ ರೀತಿ ಆಕ್ರಮಿಸಿಕೊಂಡಿದೆ. ಅಂತಹ ಶಕ್ತಿಗಳು ನಿಮ್ಮ ಹಳ್ಳಿಗೆ ನುಗ್ಗುತ್ತಿರುವುದನ್ನು ನೋಡಿದಾಗ ಓಡಿಸಿ’ ಎಂದು ಕರೆಯಿತ್ತರು.

ಮುಂಬೈನಲ್ಲಿ ಭಾರಿ ಮಳೆ: ಅನೇಕ ವಿಮಾನ ರದ್ದು, ಶಾಲೆಗೆ ರಜೆ

ಮುಂಬೈ: ಬುಧವಾರ ಸಂಜೆ ಮುಂಬೈನಲ್ಲಿ ಸುರಿದ ಭಾರೀ ಮಳೆಯಿಂದ ಹಲವು ರಸ್ತೆಗಳು ಜಲಾವೃತಗೊಂಡಿವೆ ಮತ್ತು ಕೆಲವು ವಿಮಾನಗಳ ಹಾರಾಟ ರದ್ದುಗೊಂಡಿವೆ .ರಸ್ತೆ ಜಲಾವೃತವು ಆರ್ಥಿಕ ರಾಜಧಾನಿಯ ಹಲವು ಭಾಗಗಳಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು. ಈ ನಡುವೆ ಸ್ಪೈಸ್‌ಜೆಟ್, ಇಂಡಿಗೋ ಮತ್ತು ವಿಸ್ತಾರ ಸೇರಿ ಕೆಲವು ವಿಮಾನಗಳನ್ನು ಮುಂಬೈ ಬಬದಲು ಅನ್ಯ ಮಾರ್ಗಗಳಿಗೆ ತಿರುಗಿಸಲಾಗಿದೆ. ಹವಾಮಾನ ಇಲಾಖೆಯು ಮುಂಬೈ ಮತ್ತು ನೆರೆಯ ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ್ದು, ‘ಅತ್ಯಂತ ಭಾರೀ ಮಳೆ’ ಮುನ್ಸೂಚನೆ ನೀಡಿದೆ. ಗುರುವಾರ ಶಾಲೆಗೆ ರಜೆ ನೀಡಲಾಗಿದೆ.