ಸಾರಾಂಶ
ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದ ವೇಳೆ ಉದ್ಯೋಗಕ್ಕಾಗಿ ಜಾಗವನ್ನು ಲಂಚ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬ್ಡಿದೇವಿ ಮತ್ತು ಮಿಸಾ ಭಾರತಿಗೆ ದೆಹಲಿ ಕೋರ್ಟ್ ವಿಚಾರಣೆಗೆ ಹಾಜರಾಗುವಮತೆ ಸಮನ್ಸ್ ನೀಡಿದೆ.
ನವದೆಹಲಿ: ಲಾಲು ಯಾದವ್ ರೈಲ್ವೆ ಸಚಿವರಾಗಿದ್ದಾಗ ರೈಲ್ವೆ ನೇಮಕಾತಿಯಲ್ಲಿ ಭೂಮಿ ರೂಪದಲ್ಲಿ ಲಂಚ ಪಡೆದುಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ಹಾಗೂ ಅವರ ಪುತ್ರಿ ಮಿಸಾ ಭಾರತಿ ಅವರಿಗೆ ದೆಹಲಿಯ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಇದನ್ನು ಆಧಾರವಾಗಿಟ್ಟುಕೊಂಡು ಫೆ.9ಕ್ಕೆ ಕೋರ್ಟ್ ಎದುರು ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.ರಾಬ್ಡಿದೇವಿ, ಮಿಸಾ ಭಾರತಿ ಮತ್ತು ಹೇಮಾ ಯಾದವ್‌ಗೆ ಸಮನ್ಸ್ ನೀಡಲಾಗಿದ್ದು, ಈ ಮೂವರನ್ನು ವಿಚಾರಣೆ ನಡೆಸಲು ಸಾಕಷ್ಟು ಕಾರಣಗಳಿವೆ ಎಂದು ಕೋರ್ಟ್ ಹೇಳಿದೆ.
ಅಲ್ಲದೇ ಈ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಉದ್ಯಮಿ ಅಮಿತ್ ಕತ್ಯಾಲ್‌ರನ್ನು ಹಾಜರು ಪಡಿಸುವಂತೆ ತಿಳಿಸಿದೆ.